ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ

ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ ||

ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ
ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ
ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ
ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 ||

ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ
ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ
ಯುವಜನಕೆ ಯುವ ಮನವ ಜೋಡಿಸಿ ಮನದಿ ನವ ಸಂಕಲ್ಪ ನಿರ್ಮಿಸಿ
ಬೆಟ್ಟದೇರಿನ ಕಣಿವೆ ತಂಪಿನ ಕಡಲಿನಂಚಲಿ ಕಾಡಲಿ || 2 ||

ಬಗ್ಗಿ ಕುಗ್ಗಿದ ಹಿಂದು ಹೃದಯಕೆ ಸ್ವಾಭಿಮಾನದ ವಜ್ರಲೇಪ
ನೀಡೆ ಹೊಮ್ಮಿಡೆ ಸಂಘ ಗಂಗೆಯ ಸ್ರೋತ ನಾಡಿಗೆ ಕಾಯಕಲ್ಪ
ದೇವಭೂಮಿಯ ದಿವ್ಯ ಶಿಶುಗಳು ಭವ್ಯಗೊಳಿಪ ಕಲಾಪ
ತೆಂಗುಕಂಗಿನ ತಾಳೆಬಾಳೆಯ ಚಾಮರದ ಸಿರಿ ಬೀಡಲಿ || 3 ||

Leave a Reply

Your email address will not be published. Required fields are marked *

*

code