ಧರೆಯಲಿ ಸುಂದರ ಸ್ವರ್ಗವ ಸೃಜಿಸಲು
ಸಮರಸಭರಿತ ಸಮಾಜವ ರಚಿಸಲು
ಎಲ್ಲರು ಒಂದಾಗಿ… ಬನ್ನಿ, ಸೇವೆಗೆ ಮುಂದಾಗಿ || ಪ ||
ತರತಮ ಭೇದಗಳೆಲ್ಲವನಳಿಸಿ
ಸರಿಸಮ ಭಾವವನೆಲ್ಲೆಡೆ ಬೆಳೆಸಿ
ಹಿರಿಯರು ತೋರಿರುವ ಮೇಲ್ಪಂಕ್ತಿ
ಗುರಿಸಾಧನೆಗೆ ಅದುವೇ ಶಕ್ತಿ || 1 ||
ದೀನದುಃಖಿಗಳ ಕಂಬನಿಯೊರೆಸಿ
ಮಾನವೀಯತೆಯ ಕಂಪು ಪಸರಿಸಿ
ವಂಚಿತರಿಗೂ ಅವಕಾಶವ ನೀಡಿ
ಮೌನಕ್ರಾಂತಿಗೆ ನಾಂದಿಯ ಹಾಡಿ || 2 ||
ಮನೆಮನೆಯಾಗಲಿ ಕಾರ್ಯಾಗಾರ
ಕಣಕಣವೂ ಶಕ್ತಿಯ ಭಂಡಾರ
ಜನಮನದಲಿ ಮೂಡಿಸಿ ಜಾಗೃತಿಯ
ಕನಸಿಗೆ ನೀಡಿರಿ ಕೃತಿಯಾಕೃತಿಯ || 3 ||