ದೇಶ ಪ್ರೇಮದ ವೀರಘೋಷಣೆ ಮೊಳಗಲಿ ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ ಹೊಮ್ಮಲಿ ಹೊರಹೊಮ್ಮತಾ ಚಿಮ್ಮಲು ಬಾನೆತ್ತರ ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ || ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ ರುಧಿರವೆಲ್ಲ ಯಜ್ಞದಲ್ಲಿ ಉರಿದು ಉರಿದು ಹೋಗಲು ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 || ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ ಸರ್ವರರ್ಪಣೆಯಾಗಲು ಸಂಘೋದ್ಘೋಷ ಹೃದಯದಿ […]
ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]
ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]
ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ ಜ್ಞಾನ ಭಿಕ್ಷೆಯ ಜಗಕೆ ನೀಡುತ ನಗುತಲಿರಲಿ ಸಂತತ || ಪ || ಎಡರು ತೊಡರು ಗಳಿಹುದು ಬಹಳ ಸುಲಭವಲ್ಲವು ಆತ್ಮನಿರ್ಭರ ದಿಟ್ಟ ಆತ್ಮ ಬಲದಿ ನಡೆಯುತ ಸಾರುವ ನವ ಕ್ರಾಂತಿ ಸಮರ ಬನ್ನಿರೆಲ್ಲರು ಒಂದಾಗುವ ಗೆಲ್ಲುವ ಈ ಶಾಂತ ಸಮರವ ಸ್ವಾರ್ಥ ಮರೆತು ರಾಷ್ಟ್ರಕಾಗಿಯೆ ದಿಟದಿ ಜೀವನ ಸವೆಸುವ || 1 || ನಮ್ಮ ಏಳ್ಗೆಗೆ ನಾವೇ ಶಿಲ್ಪಿಯು ಎಂದು ತಿಳಿದು ನಡೆಯುವ ಸತ್ವ ಶಕ್ತಿ ಯುಕ್ತಿಯಿಂದಲಿ ರಾಷ್ಟ್ರದ ಸೇವೆಯ ಮಾಡುವ […]
ಓ…ಓ… ಚೆಲುವಿನ ಮುದ್ದಿನ ಮಕ್ಕಳೇ ಮನೆ ಮನೆಯ ಅಂಗಳದಿ ಅರಳಿರುವ ಹೂವುಗಳೇ ನಾಳೆದಿನ ನಾಡಿದನು ನಡೆಸುವರು ನೀವುಗಳೇ ಓ… ಚೆಲುವಿನ ಆ…. ಮುದ್ದಿನ || ಚೆಲುವಿನ || ತಂದೆ ತಾಯಿ ಹೇಳಿದ ರೀತಿ ನಡೆಯಲು ಬೇಕು ಶಾಲೆಯ ಗುರುಗಳು ಕಲಿಸಿದ ಪಾಠ ಕಲಿಯಲು ಬೇಕು ದೊಡ್ಡವರಲ್ಲಿ ಭಕ್ತಿ ಗೌರವ ತೋರಲು ಬೇಕು ನಡೆನುಡಿಯಲ್ಲಿ ಸತ್ಯವ ಎಂದು ಪಾಲಿಸಬೇಕು ಸತ್ಯವ ಎಂದು ಪಾಲಿಸಬೇಕು || 1 || ಸ್ನೇಹಿತರಲ್ಲಿ ಪ್ರೀತಿಯ ತೋರಿ ಸೋದರ ಭಾವದಿ ನೋಡಿ ಸೋಮಾರಿಯಾಗದೆ ಕೊಟ್ಟಿಹ […]
ಗ್ರಾಮದ ಕಡೆಗೆ ಸಾಗೋಣ ಗ್ರಾಮ ವಿಕಾಸ ಗೈಯೋಣ ರಾಮ ರಾಜ್ಯವ ರಚಿಸೋಣ ಸಮರಸ ಭಾರತ ಕಟ್ಟೋಣ || ಪ || ಉಣ್ಣುವುದಕ್ಕೆ ಅನ್ನವನ್ನಿತ್ತ ಮಣ್ಣ ಸೇವೆ ದಿನ ದಿನ ಗೈಯುತ್ತ ನೊರೆ ನೊರೆ ಹಾಲಿನ ಅಮೃತ ವಿತ್ತ ನಲ್ಮೆಯ ಆಕಳ ಮೈದಡವುತ್ತಾ ಅಂಬಾ ಎನ್ನುವ ಆ ಧ್ವನಿಗೆ……… ದೇವರು ಬರುವನು ಈ ಭೂಮಿಗೆ || 1 || ಮನ ಮನೆ ಮುಂದಿನ ಅಂಗಳದಿಂದ ಮೂಡುತಿದೆ ರಂಗೋಲಿ ಚಂದ ಊರೆಜಮಾನರ ಹಿರಿನುಡಿಯಿಂದ ಕೂಡುತಿದೆ ಜನಮನ ಸಂಬಂಧ ಕಾಯಕದಲ್ಲಿ ಆನಂದ………. […]
ಬೆಳಕಿನ ಕಡೆ ಮುಖ ಮಾಡೋಣ ಕತ್ತಲೊಡನೆ ಸೆಣೆಸಾಡೋಣ || ಪ || ದೂರವಿದ್ದರೆ ಹತ್ತಿರ ಸೆಳೆದು ಸ್ನೇಹದ ಸುಧೆಯನು ಹರಿಸೋಣ ಬದುಕಿನ ಬಯಲಲಿ ಬೀಳುವ ಕಸವನು ಸದಾಕಾಲವೂ ಗುಡಿಸೋಣ || 1 || ಸ್ವಾರ್ಥ ದುರಾಸೆ ಭಾರಿ ಬಲೂನಿಗೆ ಮಾನವತೆಯ ಮೊನೆ ಚುಚ್ಚೋಣ ನಾಳೆಯೇ ಇಲ್ಲದ ಕಣ್ಣುಗಳಲ್ಲಿ ಕನಸಿನ ದೀಪವ ಹಚ್ಚೋಣ || 2 || ಹಸಿದ ಒಡಲಿಗೆ ತುತ್ತು ನೀಡಿ ಸುರಿವ ಕಂಬನಿಯ ಒರೆಸೋಣ ಬೆಳೆವ ಸಸಿಗಳಿಗೆ ನೀರನ್ನೆರೆದು ಶುಭದ ಮಾತಿನಲಿ ಹರಸೋಣ || 3 […]
ಅಂದು ನೀ ಕಂಡ ಕನಸು ಇಂದು ಹೆಮ್ಮರವಾಗಿ ಸಂಘರೂಪದಿ ನಿಂದು ಫಲವೀಯುತಿಹುದು ಧರ್ಮದ ನೆಲೆಯಲ್ಲಿ ದೇಶವೆಂಬ ನಿಲುವ ಹೊತ್ತಿದ್ದ ನನ್ನ ಕನಸು ನನಸಾಯಿತಿಂದು || ಪ || ರಾಷ್ಟ್ರದ ಭವಿತವ್ಯ ಯುವಕರ ಕೈಲೆಂದು ಸಾರಿದ ನಿನ್ನ ಊಹೆ ನಿಜವಾಯಿತಿಂದು ಎಂತೆಂಥ ಕಷ್ಟಗಳು ರಾಷ್ಟ್ರಕೇ ಒದಗಿದರೂ ರಾಷ್ಟ್ರೀಯರೇ ನಿಂದು ಪರಿಹರಿಸುತಿಹರು || 1 || ನೀನೊಬ್ಬ ದ್ರಷ್ಟಾರ ಮಾಡಿದೆ ಉದ್ಗಾರ ಭರತಮಾತೆಯ ಸುತರು ರಾಷ್ಟ್ರೀಯರೆಂದು ಒಬ್ಬೊಬ್ಬ ರಾಷ್ಟ್ರೀಯ ಸ್ವಯಂಸೇವಕನೆಂದು ನೀನು ಕೊಟ್ಟ ವ್ರತದೀಕ್ಷೆ ಅಜರಾಮರ || 2 || […]
ಗತ ಇತಿಹಾಸದ ಗಡಿಗಳ ಮೀರಿದ ವೀರನು ಗುಣಶೇಖರನು ಹಿಂದವಿ ಶಕ್ತಿಯ ಮಾತೆಯ ಮಡಿಲಿನ ಪುರುಷಸಿಂಹನು ಅಗ್ರಜನು || ಪ || ಎಳೆಯ ಮನವದು ಪರರನು ಒಪ್ಪದೆ ತನ್ನದೆ ಹೆಜ್ಜೆಯ ಮೆಟ್ಟುವನು ಮಾವಳ ಮನದಲಿ ದೇಶಭಕ್ತಿಯ ತುಂಬುತ ಕೋಟೆಯ ಗೆದ್ದವನು ಕತ್ತಲೆ ತುಂಬಿಹ ಭರತ ಕುಲದಲಿ ಧ್ಯೇಯದ ದೀಪವೆ ಆದವನು ಸಮರ ಚತುರನು ಪ್ರಜಾಪ್ರಿಯನು ಪ್ರಚಂಡ ಶಿವನಿವನು || 1 || ಜೀಜಾಬಾಯಿಯ ಖಡ್ಗವವನು ಕನಸಿಗೆ ನನಸಾದವನು ಮೊಗಲ ಪಾಪಿಯ ಸೊಕ್ಕ ಮುರಿದ ಧೀರ ಕುಲ ತಿಲಕನು ರಾಷ್ಟ್ರದೇವನ […]
ದೀನದಯಾಳ ಗುಣಗಳ ಧಾಮ ಜೀವನವೆಲ್ಲಾ ಧ್ಯೇಯಕೆ ಹೋಮ ಸಂಯಮ ಚತುರತೆ ನುಡಿಯಲಿ ಮಮತೆ ಹೃದಯದಲಿ ಸದಾ ಭಾರತ ಮಾತೆ || ಪ || ಏಕಾತ್ಮ ಭಾವದ ವಿಚಾರ ಕಿರಣದಿ ಬೆಳಗಿದೆ ನಾಡಿನ ಮನ ಮನವ ತತ್ವವೆ ಜೀವನ ವ್ಯಕ್ತಿಯೆ ಸಾಧನ ಸರಳತೆಯ ಮೂರ್ತಿಗಿದೋ ನಮನ || 1 || ಕಾಲವು ಸರಿದು ಶತಕವೆ ಕಳೆದು ಇಂದಿಗು ದೀಪವೆ ಆ ಬದುಕು ನಮಗೆ ದಾರಿ ತೋರುವ ತೆರದಿ ಕಾಣಲಿ ದಯಾಳನ ಕ್ಷಣ ಕ್ಷಣವೂ || 2 || ಯವನ […]