ಓ…ಓ… ಚೆಲುವಿನ ಮುದ್ದಿನ ಮಕ್ಕಳೇ

ಓ…ಓ… ಚೆಲುವಿನ ಮುದ್ದಿನ ಮಕ್ಕಳೇ
ಮನೆ ಮನೆಯ ಅಂಗಳದಿ ಅರಳಿರುವ ಹೂವುಗಳೇ
ನಾಳೆದಿನ ನಾಡಿದನು ನಡೆಸುವರು ನೀವುಗಳೇ
ಓ… ಚೆಲುವಿನ ಆ…. ಮುದ್ದಿನ || ಚೆಲುವಿನ ||

ತಂದೆ ತಾಯಿ ಹೇಳಿದ ರೀತಿ ನಡೆಯಲು ಬೇಕು
ಶಾಲೆಯ ಗುರುಗಳು ಕಲಿಸಿದ ಪಾಠ ಕಲಿಯಲು ಬೇಕು
ದೊಡ್ಡವರಲ್ಲಿ ಭಕ್ತಿ ಗೌರವ ತೋರಲು ಬೇಕು
ನಡೆನುಡಿಯಲ್ಲಿ ಸತ್ಯವ ಎಂದು ಪಾಲಿಸಬೇಕು
ಸತ್ಯವ ಎಂದು ಪಾಲಿಸಬೇಕು || 1 ||

ಸ್ನೇಹಿತರಲ್ಲಿ ಪ್ರೀತಿಯ ತೋರಿ ಸೋದರ ಭಾವದಿ ನೋಡಿ
ಸೋಮಾರಿಯಾಗದೆ ಕೊಟ್ಟಿಹ ಕೆಲಸ ತಪ್ಪದೆ ಮಾಡಿ
ಯಾರೇ ಆಗಲಿ ಕಷ್ಟದಲ್ಲಿದ್ದರೆ ಸಹಾಯ ಹಸ್ತ ನೀಡಿ
ಭೇದವ ತೊರೆದು ಬಾಳಿರಿ ಎಂದು ಎಲ್ಲರೂ ಒಂದು ಗೂಡಿ
ಎಲ್ಲರೂ ಒಂದು ಗೂಡಿ || 2 ||

Leave a Reply

Your email address will not be published. Required fields are marked *

*

code