ಅಬ್ಬರದ ಜೀವನದ ಕಾರ್ಮೋಡ ಕವಿದಿರಲು
ವಿಸ್ಮೃತಿಯು ಹೆಗಲೇರಿ ನಾಳೆಗಳು ನಲುಗಿರಲು
ಮಬ್ಬಡರಿ ಬರಿದಾದ ಕುರುಡು ಮನಗಳಲೀಗ
ಅಸ್ಮಿತೆಯ ಜಾಗರಣ ನಡೆಯಬೇಕು || ಪ ||
ಸ್ವಂತ ಜೀವನ ಮರೆತು ನಿತ್ಯ ಶುದ್ಧತೆ ಬಯಸಿ
ವಿಶ್ವಗುರು ಭಾರತಕೆ ಸತತ ಕಾಯವ ಸವೆಸಿ
ಸತ್ಯದರಿವಿಗೆ ತಪಿಸಿ ಸಂತ ಜೀವನ ನಡೆಸಿ
ಸ್ವಾರ್ಥವರಿಯದ ಬದುಕ ಬಾಳಬೇಕು || 1 ||
ಸ್ವಸ್ಥ ದೇಶಕೆ ಇಲ್ಲಿ ಸ್ವಸ್ಥ ವ್ಯಕ್ತಿಯ ಸೃಷ್ಟಿ
ವೇದ ಯೋಗದ ಮಾರ್ಗ ಕಲೆಯ ಸಮ್ಮಾನ
ವಿಜ್ಞಾನ ಭೂಸೇವೆ ಲೋಕಹಿತದೆಡೆ ದೃಷ್ಟಿ
ಗುರುಕುಲವು ಜಗದಗಲ ಬೆಳೆಯಬೇಕು || 2 ||
ಹಿರಿಯರೆಲ್ಲರ ಹರಕೆ ಸಜ್ಜನರ ಹಾರೈಕೆಯಿದೆ
ಅರ್ಧಮಂಡಲವಿಂದು ಸಂಪನ್ನವಾಗಿಹುದು
ನಡೆದ ದಾರಿಯ ನೆನೆದು ಮುನ್ನಡೆವ ಬಯಕೆ ಇದೆ
ಪೂರ್ಣಮಂಡಲದೆಡೆಗಿಟ್ಟ ಹೆಜ್ಜೆಯೆಮದು || 3 ||