ಆ ಶಿವನ ದೇಶಿಕನ ಧ್ಯೇಯಕೆ ನಮನಾ (ಘೋಷ್ – ಶಿವರಾಜ ರಚನೆ – ಕನ್ನಡ)

ಆ ಶಿವನ ದೇಶಿಕನ ಧ್ಯೇಯಕೆ ನಮನಾ….
ರಾಷ್ಟ್ರಪಾಲ ಧೀರತೇಜ ವೀರಧೀರ ನೀನೆಮ ಶಿವ
ರಾಷ್ಟ್ರಪಾಲ ಧೀರತೇಜ ವೀರಧೀರನೇ……

ದುಷ್ಟರಿಗಿವ ಯಮಸದೃಶ
ಶಿಷ್ಟರಿಗಿವನಿನಸದೃಶ
ಕಷ್ಟದಲಿಹ ನಷ್ಟದಲಿಹ ಜನರಿಗಿವ ಶಿವಸದೃಶ

ದುಷ್ಟರಿಗಿವ ಯಮಸದೃಶ
ಶಿಷ್ಟರಿಗಿವನಿನಸದೃಶ
ಕಷ್ಟದಲು ನಷ್ಟದಲು ತಂದನು ಹರುಷ

ತ್ಯಾ….ಗಿಯಿವಾ, ಯೋಗದಿ ರತನೂ…
ಭೋ…ಗಪರಾ…ಪುರಜನರ ಸರಿಪಡಿಸುವ
ತ್ಯಾ….ಗಿಯಿವಾ, ಯೋಗದಿ ರತನೂ….
ಭೋ…ಗಪರಾ…ಜಡಮತಿಯ ಹರಾ…

ಭಾರತಭಕುತ
ವಿಜಯಕೆ ತುಡಿತ
ಕಾರ್ಯದಿ ನಿರತ
ಶಿವನನವರತಾ

ಭಾರತ ಭಕುತ
ವಿಜಯಕೆ ತುಡಿತ

ಅನವರತ
ನಮತುಡಿತ
ಜಡತೆಗೆ ಥಳಿತಾ……

Leave a Reply

Your email address will not be published. Required fields are marked *