ಪುನರಪಿ ಅವತರಿಸಿದೆ ಭಾರತದಿ
ಕಾಲಧರ್ಮ ಸ್ವದೇಶೀ |
ರಾಷ್ಟ್ರದ ವೈಭವ ಸಾಧನೆಗುತ್ತರ
ಕಾಮ್ಯ ಕರ್ಮ ಸ್ವದೇಶೀ || ಪ ||
ಸ್ವತ್ವವ ಮರೆತು ಸ್ವರಾಜ್ಯದ ಪಡೆದೆವು
ಪರತತ್ವದ ಗುಂಗಿನಲಿ |
ಸಾಲದ ಶೂಲಕೆ ನೋಯದೆ ನಲಿದೆವು
ಪರದೇಶದ ಹಂಗಿನಲಿ |
ಕಾಲವು ಬದಲಾಗಿದೆ ಸಿಡಿದೆದ್ದಿದೆ
ಸ್ವಾಭಿಮಾನ ಸ್ವದೇಶೀ || 1 ||
ಆರ್ಥಿಕ ದಾಹದ ಜಾಲಕೆ ಸಿಲುಕುತ
ದಾಸ್ಯದಿ ಬಾಳುವುದುಂಟೇ |
ಕುಸಿದಿರೆ ಸಂಸ್ಕøತಿ ಹಸಿದಿರೆ ಸಂತತಿ
ನಗುವಳೆ ಭಾರತಮಾತೆ |
ಪರಿಶೋಧನೆ ಮೈ ತಳೆದಿದೆ ಬೆಳೆದಿದೆ
ಸರ್ವಸ್ಪರ್ಶಿ ಸ್ವದೇಶೀ || 2 ||
ನಾಡನು ವ್ಯಾಪಿಸೆ ದಾಂಗುಡಿ ಇಡುತಿದೆ
ಮಾರಕ ತಂತ್ರ ವಿದೇಶೀ |
ಮನೆ ಮನೆಯಲಿ ಮಾರ್ದನಿಸುತ ಹೊಮ್ಮಲಿ
ತಾರಕ ಮಂತ್ರ ಸ್ವದೇಶಿ |
ಸ್ವತ್ತ್ವದ ಜಾಗೃತಿ ಮೆರೆದಿದೆ ಮೊರೆದಿದೆ
ಧ್ಯೇಯವೊಂದೇ ಸ್ವದೇಶೀ || 3 ||