ನಿನ್ನರುಣ ಕಿರಣಗಳು ನಿನ್ನ ಶುಭಕರ ಬೆಳಕು
ನನ್ನ ಧೀಯನು ಬಳಸಿ ಬೆಳಗೆ ಬರಲಿ || ಪ ||
ನಿನ್ನ ಸರ್ವಾತ್ಮದಲಿ ನನ್ನನರಿವಂದದಲಿ
ನನ್ನ ಹೃದಯವ ಹಿರಿದು ಮಾಡೆಬರಲಿ || 1 ||
ಭೇದವೇ ನಿನಗಿಲ್ಲ ಶತ್ರು ಮಿತ್ರರು ಮಿಲ್ಲ
ಒಳಿತು ಕೆಡುಕನು ದಾಟಿದಿರವು ನಿನದು || 2 ||
ನಾನು ನಿನ್ನಂತಾಗಿ ನಿನ್ನೊಳೈಕ್ಯನೇ ಆಗಿ
ನಿನ್ನಿರವಲೇ ಜಗವನರಿವುದೆಂದು || 3 ||