ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು
ಲೇಸಾಗಿ ಹರಸಿದೆವು ಬಾಲಕರು ಬಂದು || ಪ ||
ಗಣಪತಿಯ ಪದತಲಕೆ ಶರಣು ಶರಣೆಂದು
ನವದುರ್ಗೆ ಜಗಕೆಲ್ಲ ಶುಭವ ತರಲೆಂದು
ಈಶ ನಿಮಗತ್ಯಧಿಕ ಫಲವ ಕೊಡಲೆಂದು
ವಿಜಯ ದಶಮಿಯು ನಮಗೆ ಜಯವ ತರಲೆಂದು || 1 ||
ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು
(ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು)
ಧನಕನಕ ಗೋಭಾಗ್ಯ ನಿಮಗೊದಗಲೆಂದು
ಸಾವಯವದಿಂದನ್ನ ನಮಗೊದಗಲೆಂದು
ಹೂ ಕೋಲ ದರುಶನದಿ ಶುಭವು ನಿಮಗೆಂದು || 2 ||
ಧರ್ಮದಿಂದಲೆ ನಾಡು ಮುನ್ನಡೆಯಲೆಂದು
ಜನಜನರು ಒಂದಾಗಿ ಸಾಗುತಿರಲೆಂದು
ವೀರ ಯೋಧರು ನಾಡ ಗಡಿ ಕಾಯಲೆಂದು
ತಾಯಿ ಭಾರತಿಗೆ ಜಯವು ನಿತ್ಯವಿರಲೆಂದು || 3 ||