ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ
ಸೆಟೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ || ಪ ||
ಶುಭವ ಅರುಹುತಿದೆ ಶುಭ್ರ ಮುಂಜಾವು ಭಾಸ್ಕರನ ಕಿರಣ ಭಾಷ್ಯ
ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ
ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ
ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ || 1 ||
ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ
ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ
ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ
ಸ್ಪಷ್ಟ ಸಂದೇಶ ಗಟ್ಟಿಯಾಗಿಹುದು ಸಂಚೆಲ್ಲ ಛಿದ್ರ ಛಿದ್ರ || 2 ||
ಶತಮಾನದೊಳಗೆ ಎಲ್ಲೆಲ್ಲು ಸಂಘ ಪರಿಣಾಮ ದೇಶ ವ್ಯಾಪ್ತ
ಮನೆ ಮನೆಗಳಲ್ಲು ತನುಮನಗಳಲ್ಲು ಮೊಳೆದಿಹುದು ಒಂದೆ ಭಾವ
ಬಿತ್ತಿ ಒಮ್ಮತವ ಅಳಿಸಿ ತರತಮವ ಗಳಿಸುವೆವು ತಾಯ ಒಲವ
ಭಾರತ ಮಾತೆಯ ವಿಶ್ವಗುರುವಾಗಿ ಮೆರೆಸುವುದೆ ನಮ್ಮ ಧ್ಯೇಯ || 3 ||