ಭಯವಿರದ ಭಾರತವ ಕಟ್ಟಲೋಸುಗ ಬನ್ನಿ
ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ || ಪ ||
ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ
ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ
ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ
ಮುಂದಾಗಿ ಎದುರಿಸುವ ಕ್ಷಾತ್ರಯೋಧ || 1 ||
ದೈನ್ಯವೇತಕೆ ನಿನಗೆ ಮಾನ್ಯ ಭಾರತಿ ಪುತ್ರ
ಕಪಿಸೈನ್ಯ ಸಾಗರವ ದಾಟಿಲ್ಲವೇನು ?
ವೈನತೇಯನು ತಂದ ಪೀಯೂಷವಿರುವಾಗ
ಸಾವೆಂಬ ವಿಷಸರ್ಪಕಂಜಲೇನು ? || 2 ||
ಭಾರತದ ಬಹುಳತೆಗೆ ಹಿಂದುತ್ವವಡಿಪಾಯ
ಮರೆಯದಿರು ಮುರಿಯದಿರು ಸೇತುಬಂಧ
ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ
ಉರುಳಾಗದಿರಲಿ ದಯೆ ಔದಾರ್ಯವು || 3 ||
ಭ್ರಮೆಯ ಸೇವೆಯ ನೆಪದಿ ಪರಮತದ ಆಕ್ರಮಣ
ತಮಕೆ ತುತ್ತಾಗುತಿದೆ ನಮ್ಮ ಗೋವು
ಅಮರನಾಥದಿ ಮೆರೆದ ಏಕತೆಯೆ ಪ್ರೇರಣೆಯು
ಸಮರವಾದರೂ ಸರಿಯೆ ಸಿದ್ಧ ನಾವು || 4 ||