ಸೇವೆಯೇ ಜೀವನದ ಪರಮಧರ್ಮ

ಸೇವೆಯೇ ಜೀವನದ ಪರಮಧರ್ಮ
ಜೀವಲೋಕದ ಹಿತದ ಆಧಾರಮರ್ಮ || ಪ ||

ಅದ್ವೈತ ಸಂಬಂಧ ದ್ವೈತದರಿವಿನೊಳಿಂದ
ಅದ್ವಿತೀಯಾನಂದ ಸೇವೆಯಿಂದ
ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ
ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 ||

ಸಾಮಾಜಿಕರ ನಡುವೆ ಸಮರಸವನು ಎರೆದು
ಸಾಂಮನಸ್ಯದ ಚಿಗುರು ಹೂವು ಪಡೆದು
ಈ ಮಹಾ ಹಿಂದೂ ಜೀವನ ತರುವು ನಳನಳಿಸೆ
ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 2 ||

ನೀಗುವೆವು ಲೋಕಗಳ ಶ್ಲೋಕಗಳ ಸಂಕುಲವ
ನೀಡುವೆವು ಜನಮನಕೆ ಚೈತನ್ಯವ
ಬಲಗೊಳ್ಳಲಿ ಭಾರತವು ಫಲ ತರಲಿ ಪೌರುಷವು
ನೆಲೆಗೊಳಿಸಲು ಸತ್ಯ ಸೌಂದರ್ಯದಭಿರಾಮ || 3 ||

Leave a Reply

Your email address will not be published. Required fields are marked *