ಸಾವಿಗಂಜದ, ಸೋಲಿಗಳುಕದ

ಸಾವಿಗಂಜದ, ಸೋಲಿಗಳುಕದ
ಸಿಡಿಲಿನಬ್ಬರ ಹೃದಯಕೆ
ರಾಷ್ಟ್ರಭಕ್ತಿಯ ಗಂಗೆ ಹರಿಯಲಿ ಸ್ವಾರ್ಥವಿಲ್ಲದ ಜೀವಕೆ || ಪ ||

ಎದುರು ನಿಲ್ಲಲಿ ಕೋಟಿ ಶಕ್ತಿಯು
ಹೊಸಕಿಹಾಕುವ ಬಲವಿದೆ
ತಾಯಿ ಭಾರತಿ ಚರಣಕೆಮ್ಮಯ ರುಧಿರಗೈಯುವ ಛಲವಿದೆ || 1 ||

ರಾಷ್ಟ್ರನಿಷ್ಠರ ದಿವ್ಯ ಜೀವನ
ಎಮ್ಮ ನಡಿಗೆಯ ಮುಂದಿದೆ
ಹಿಂದೆ ಸರಿಯುವ ಮನಸೇ ಇಲ್ಲ ನಾಡ ಮೆರೆಸುವ ಕಾರ್ಯಕೆ || 2 ||

ತಿರುಚಿದಿತಿಹಾಸವನು ಬದಲಿಸಿ
ಸತ್ಯ ಹಣತೆಯ ಬೆಳಗಿರಿ
ಕ್ರಾಂತಿವೀರ ವಿವೇಕರೆದೆಯ ಕನಸು ನನಸುಗೊಳಿಸಿರಿ || 3 ||

Leave a Reply

Your email address will not be published. Required fields are marked *

*

code