ಶ್ರೀಗಂಧಾ ಈ ನೆಲದ ಮಣ್ಣಿದು ತಪೋವನವು ಪ್ರತಿ ಗ್ರಾಮವು

ಶ್ರೀಗಂಧಾ ಈ ನೆಲದ ಮಣ್ಣಿದು ತಪೋವನವು ಪ್ರತಿ ಗ್ರಾಮವು
ಪ್ರತಿ ಮಗಳೂ ಆ ದೇವಿಯ ರೂಪ
ಪ್ರತಿ ಮಗನೂ ಶ್ರೀರಾಮನು || ಪ ||

ಪ್ರತಿ ಶರೀರ ಮಂದಿರದೊಲು ಪಾವನ
ಪ್ರತಿ ಮಾನವ ಉಪಕಾರಿಯು
ಸಿಂಹವೇ ಇಲ್ಲಿ ಮಕ್ಕಳ ಆಟಿಕೆ
ಹಸುವೇ ಇಲ್ಲಿದೋ ತಾಯಿಯು
ಬೆಳಗಿನ ಸಮಯದಿ ಶಂಖದ ಧ್ವನಿಯು
ಸಂಜೆಗೆ ತಪ್ಪದೆ ಜೋಗುಳವು ||ಪ್ರತಿ ಮಗಳೂ||

ಕರ್ಮದ ಮೇಲೆ ಭಾಗ್ಯವು ಬದಲು
ಶ್ರಮನಿಷ್ಠೆಗಳೇ ಕಲ್ಯಾಣವು
ತ್ಯಾಗ ತಪದ ಪಾರಾಯಣ ಗೈವ
ಕವಿ ಮನಸಿನ ಸಿಹಿವಾಣಿಯು
ಜ್ಞಾನವು ಇಲ್ಲಿ ಗಂಗೆಯ ಸಮವು
ನಿರ್ಮಲವೂ..ಪ್ರತಿ ನಿತ್ಯವೂ ||ಪ್ರತಿ ಮಗಳೂ||

ಸೈನಿಕರಿಲ್ಲಿ ರಣರಂಗದಲಿ ಗೀತೆಯ ಉಲಿವ ವೈಶಿಷ್ಟ್ಯವು
ಹೊಲದಲಿ ಇಲ್ಲಿ ನೇಗಿಲ ಕೆಳಗೆ ಆಟವಾಡುತಿಹ ಸೀತೆಯು
ಜೀವನದಾ ಆದರ್ಶವೇ ಇಲ್ಲಿ ಈಶ್ವರನಾ ಸನ್ನಿಧಾನವು ||ಪ್ರತಿ ಮಗಳೂ||

ಮೂಲ: ಹಿಂದಿ ‘ಚಂದನ್ ಹೇ ಇಸ್ ದೇಶಕೀ ಮಾಟಿ’

Leave a Reply

Your email address will not be published. Required fields are marked *

*

code