ಶ್ರಾವಣದ ಸಂಭ್ರಮದಲಿ

ಸ್ವಾತಂತ್ರ ಗೀತೆ
ರಾಗ : ಹಿಂದೋಳ
ಚತುರಶ್ರ ಏಕ ತಾಳ

ಶ್ರಾವಣದ ಸಂಭ್ರಮದಲಿ
ಸ್ವಾತಂತ್ರದ ಹೊಸ್ತಿಲಲಿ
ನೆನೆಯೋಣ ಸೇನಾನಿಗಳ
ಅಮರ ತ್ಯಾಗ ಸಾಹಸದ ಕಥನಗಳ ಸಾರುತ್ತಾ
ಸ್ಮರಿಸೋಣ ಬಲಿದಾನಿಗಳ || ಶ್ರಾವಣದ ಸಂಭ್ರಮದಲಿ ||

ಧರ್ಮ ಭೂಮಿ ಭಾರತವ ಒಡೆದಾಳಲು ಬಂದಿದ್ದ
ಬಿಳಿಯರಿಗೆ ಅಸ್ತ್ರ ಹಿಡಿದು ಮಾರಕನಾದೆ
ಪ್ರಥಮ ಸಂಗ್ರಾಮದಲಿ ಅಗ್ನಿಜ್ವಾಲೆ ಸಿಡಿಸುತ್ತಾ
ಕರ್ಮ ಭೂಮಿ ಭಾರತಕ್ಕೆ ಮಂಗಳನಾದೆ
ಮಂಗಳನಾದೆ..! || ಶ್ರಾವಣದ ಸಂಭ್ರಮದಲಿ ||

ಶೂರವೀರ ಪರಂಪರೆಯ ಸಾಮ್ರಾಜ್ಯವ ಕಸಿಯುತ್ತಾ
ಮೆರೆಯುತ್ತಿದ್ದ ದುರುಳ ದೊರೆಯ ಎದುರಿಸಿ ನಿಂತೆ…
ನಮ್ಮ ದೇಶ ನಮ್ಮದೆಂದು ರಣಕಹಳೆ ಮೊಳಗುತ್ತಾ
ರಣರಂಗದಿ ದುರ್ಗೆಯಾದೆ, ರಾಣಿಯಾದೆ
ಝಾನ್ಸಿ ರಾಣಿಯಾದೆ..! || ಶ್ರಾವಣದ ಸಂಭ್ರಮದಲಿ ||

ನನ್ನ ಹೆಸರು ಸ್ವಾತಂತ್ರ, ನನ್ನುಸಿರೇ ಸ್ವಾತಂತ್ರ
ಎಂದು ಸಾರಿದ ಚಂದ್ರ ಆಜಾದ ನೀನೇ..
ವಂದೇಮಾತರಂ ಮಂತ್ರ ರಚಿಸಿ ಗೀತಗಾಯನದಿ,
ಕ್ರಾಂತಿಗಂದು ಸ್ಫೂರ್ತಿಯಾದ ಭಾರತಾಂಬೆಯಪುತ್ರ
ಬಂಕಿಮ ನೀನೇ ಬಂಕಿಮ ನೀನೇ! || ಶ್ರಾವಣದ ಸಂಭ್ರಮದಲಿ ||

ಸೋಲಿಲ್ಲದ ಸರದಾರನೆ, ನಿನ್ನ ಮಾತೇ ಸಿಡಿಗುಂಡು
ಭಾರತಾಂಬೆ ಹೆಮ್ಮೆ ಪುತ್ರರತ್ನವು ನೀನೇ!
ಸ್ವಾತಂತ್ರದ ಕನಸ ಹೊತ್ತು, ನೇಣ ಕುಣಿಕೆ ಕೊರಳಿಗಿಟ್ಟ
ಚಿರಾಯು ಕ್ರಾಂತಿಗೀತೆ ಸಿಂಹ ಭಗತ ನೀನೇ..
ಉಧಾಮ ನೀನೇ..! || ಶ್ರಾವಣದ ಸಂಭ್ರಮದಲಿ ||

ರಾಮ, ಲಾಲಾ, ಮದನ, ಅಂಬಾ, ಸುಖದೇವ, ರಾಜಗುರು
ರಸಬಿಹಾರಿ, ಮದನ, ಫಡಕೆ, ಸಾವರ್ಕರ, ತಿಲಕರು
ವೀರರಾಗಿ ಮಡಿದರಿಲ್ಲಿ ಸಾವಿರಾರು ಯೋಧರು
ಗೀತೆಯಲ್ಲ ಇದು ಚರಿತ್ರೆ ನೆತ್ತರ ಗಾಥೆ
ಭರತವರ್ಷದ ಚರಿತೆ || ಶ್ರಾವಣದ ಸಂಭ್ರಮದಲಿ ||

Leave a Reply

Your email address will not be published. Required fields are marked *