ಶತ ನಮನ ಮಾಧವ ಚರಣಮೇ   

ಶತ ನಮನ ಮಾಧವ ಚರಣಮೇ                             || ಪ ||

ಆಪ ಕೀ ಪೀಯೂಷ ವಾಣೀ ಶಬ್ದ ಕೋ ಭೀ ಧನ್ಯ ಕರತೀ
ಆಪಕೀ ಆತ್ಮೀಯತಾ ಥೀ ಯುಗಲ ನಯನೋಂಸೇ ಬರಸತೀ
ಔರ ವಹ ನಿಶ್ಚಲ ಹಸೀ ಜೋ ಗೂಂಜ ಉಠತೀ ಥೀ ಗಗನ ಮೇ     || 1 ||

ಜ್ಞಾನ ಮೇ ತೋ ಆಪ ಋಷಿವರ ದೀಖತೇ ಥೇ ಆದ್ಯ ಶಂಕರ
ಔರ ಭೋಲಾ ಭಾವ ಶಿಶು ಸಾ ಖೇಲತಾ ಮುಖ ಪರ ನಿರಂತರ
ದೀನ ದುಃಖಿಯೋಂಕೇ ಲಿಯೇ ಥೀ ದ್ರವಿತ ಕರುಣಾಧಾರ ಮನಮೇ  || 2 ||

ದುಃಖ ಸುಖ ನಿಂದಾ ಪ್ರಶಂಸಾ ಆಪ ಕೋ ಸಬ ಏಕ ಹೀ ಥೇ
ದಿವ್ಯ ಗೀತಾ ಜ್ಞಾನ ಸೇ ಯುತ, ಆಪ ತೋ ಸ್ಥಿತಪ್ರಜ್ಞ ಹೀ ಥೇ
ಭರತ ಭೂಕೇ ಪುತ್ರ ಉತ್ತಮ, ಆಪ ಥೇ ಯುಗಪುರುಷ ಜನಮೇ    || 3 ||

ಮೇರು ಗಿರಿಸಾ ಮನ ಅಡಿಗ ಥಾ, ಆಪನೇ ಪಾಯಾ ಮಹಾತ್ಮನ್
ತ್ಯಾಗ ಕೈಸಾ ಅಪ ಕಾ ವಹ, ತೇಜ ಸಾಹಸ ಶೀಲ ಪಾವನ್
ಮಾತ್ರ ದರ್ಶನ ಭಸ್ಮ ಕರದೇ, ಘೋರ ಷಡರಿಪು ಏಕ ಕ್ಷಣ ಮೇ   || 4 ||

ಸಿಂಧು ಸಾ ಗಂಭೀರ ಮಾನಸ, ಥಾಹ ಕಬ ಪಾಈ ಕಿಸೀನೇ
ಆಗಯಾ ಸಂಪರ್ಕ ಮೇ ಜೋ, ಧನ್ಯತಾ ಪಾಈ ಉಸೀ ನೇ
ಆಪ ಯೋಗೇಶ್ವರ ನಯೇ ಥೇ, ಛಲ ಭರೇ ಕುರುಕ್ಷೇತ್ರ ರಣ ಮೇ  || 5 ||

ಗೀತೆಯ ಭಾವಾರ್ಥ :
ಹೇ ಮಾಧವ, ನಿಮ್ಮ ಪಾದಗಳಿಗೆ ಶತನಮನಗಳು.

ಶಬ್ದ ಶಬ್ದಗಳನ್ನು ಧನ್ಯಗೊಳಿಸಿ ಅಮೃತದಂತಹ ಮಾತುಗಳು ನಿಮ್ಮವು. ನಿಮ್ಮ ಆತ್ಮೀಯತೆಯು ನಿಮ್ಮೆರಡು ಕಣ್ಣುಗಳಿಂದ ಮಳೆಯಾಗಿ ಸುರಿ ಯುವಂತಹುದು. ಇನ್ನು ಆ ನಿಮ್ಮ ಸ್ಥಿರವಾದ ನಗೆಯಂತೂ ಆಗಸವ್ಯಾಪಿಯಾಗಿ ಪ್ರತಿಧ್ವನಿಸುವಂತಹುದು.

ಜ್ಞಾನದಲ್ಲಿ ನೀವು ಶ್ರೇಷ್ಠ ಋಷಿಗಳಾಗಿ ಆದ್ಯ ಶಂಕರಾಚಾರ್ಯರಾಗಿ ಕಾಣಿಸುತ್ತಿದ್ದವರು. ಆದರೂ ನಿಮ್ಮ ಮುಖದಲ್ಲಿ ಶಿಶುವಿನ ಮುಗ್ಧತೆ ಸದಾ ನಲಿಯುತಿತ್ತು.ದೀನ ದುಃಖಿಗಳಿಗಾಗಿ ನಿಮ್ಮ ಮನದಲ್ಲಿ ಕರುಣೆ ಧಾರಾಕಾರವಾಗಿ ಹರಿಯುತ್ತಿತ್ತು.

ಸುಖವಿರಲಿ, ದುಃಖವಿರಲಿ; ನಿಂದಯಿರಲಿ, ಪ್ರಶಂಸೆಯಿರಲಿ – ನಿಮಗೆ ಎಲ್ಲವೂ ಸಮಾನವೇ ಆಗಿದ್ದವು. ಭಗವದ್ಗೀತೆಯ ಜ್ಞಾನದಿಂದ ಕೂಡಿದ ಸ್ಥಿತಪ್ರಜ್ಞರಾಗಿದ್ದವರು ನೀವು. ಭರತಭೂಮಿಯ ಶ್ರೇಷ್ಠ ಪುತ್ರರಾಗಿದ್ದ ನೀವು ಜನರ ನಡುವೆ ಯುಗಪುರುಷರಾಗಿದ್ದವರು.

ಮೇರು ಪರ್ವತದಂತೆ ಸ್ಥಿರವಾದ ಮನಸ್ಸನ್ನು ಪಡೆದ ಮಹಾತ್ಮರಾಗಿದ್ದವರು ನೀವು. ನಿಮ್ಮ ತೇಜಸ್ಸು, ಸಾಹಸ, ಶೀಲ, ತ್ಯಾಗ – ಇವುಗಳ ಶ್ರೇಷ್ಠತೆಯ ಬಗ್ಗೆ ಏನೆಂದು ಹೇಳಲಿ? ಕೇವಲ ದರ್ಶನ ಮಾತ್ರದಿಂದಲೇ ಅರಿಷಡ್ವರ್ಗಗಳನ್ನೆಲ್ಲ ಒಂದೇ ಕ್ಷಣದಲ್ಲಿ ಸುಟ್ಟು ಬೂದಿಗೊಳಿಸಬಲ್ಲವರು ನೀವು.

ಸಾಗರದಂತಹ ಗಂಭೀರವಾದ ನಿಮ್ಮ ಮನದ ಆಳವನ್ನು ಅರಿತವರಾದರೂ ಯಾರಿದ್ದಾರೆ? ನಿಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ಸ್ವಜೀವನದಲ್ಲಿ ಧನ್ಯತೆ ಗಳಿಸಿದವರಾದರು. ಕಪಟ ತುಂಬಿದ ಬದುಕಿನ ಕುರುಕ್ಷೇತ್ರ ಯುದ್ಧದಲ್ಲಿ ಅಭಿನವ ಯೋಗೇಶ್ವರ (ಶ್ರೀಕೃಷ್ಣ)ನೇ ಆಗಿದ್ದವರು ನೀವು.

Leave a Reply

Your email address will not be published. Required fields are marked *