ಯುವಮನದೊಳಿಂದು ಸೀಮೋಲ್ಲಂಘನದ ತವಕ : ‍Yuva Manadolindu Seemolanghanada

ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha

ಯುವಮನದೊಳಿಂದು ಸೀಮೋಲ್ಲಂಘನದ ತವಕ

ದುರುಳರೆದೆಯಲಿ ನಡುಕ ಧರೆಗೆ ಪುಳಕ

ನಿಲ್ಲದೀ ಅಭಿಸರಣ ಗೆಲ್ಲುವನಕ
ಪರಮವೈಭವ ತಾಯ್ಗೆ ಸಲ್ಲುವನಕ       ||ಪ||

ಪ್ರಾಚೀನ ಸಂಸ್ಕೃತಿಯ ನವನವೋನ್ಮೇಷದಲಿ
ಕರಕಗುತಿದೆ ಕೀಳರಿಮೆ ಸ್ವಾರ್ಥ ಮೋಹ
ಹಿಂದುತ್ವದೊಸಗೆಯಲಿ ಬಂಧುತ್ವ ಬೆಸುಗೆಯಲಿ
ದೀಪ್ತಗೊಳುತಿದೆ ಮನದಿ ರಾಷ್ಟ್ರಭಾವ   ||೧||

ಬಾಹುಬಲ ಧೀಃಶಕ್ತಿ ಸಿರಿಸಮೃದ್ಧಿಗೆ ರಕ್ಷೆ
ಸಜ್ಜನರ ಶ್ರೀರಕ್ಷೆ ಸಂಘಶಕ್ತಿ
ಬರಿ ದಿಧೀವಿಷೆಯಲ್ಲ ಹಿಂದು ಸತ್ವೋನ್ನತಿಯು
ಜಗಕೆ ಮಂಗಳವೀವ ಪುಣ್ಯಕೀರ್ತಿ  ||೨||

ಚರಿತೆದಿಶೆ ಹೊರಳುತಿದೆ ಸುಮುಹೂರ್ತ ಸಮನಿಸಿದೆ
ತಾಯಿ ಭಾರತಿಗಿಂದು ಲಕ್ಷಾರ್ಚನೆ
ಬೆವರು ನೆತ್ತರು ಹರಿಸಿ ಜೀವಭಾವವ ಬೆರೆಸಿ
ಧ್ಯೇಯ ಸಿಂಚಿತ ಹೃದಯ ಪುಷ್ಪಾರ್ಚನೆ ||೩||

Labels: ಯುವಮನದೊಳಿಂದು ಸೀಮೋಲ್ಲಂಘನದ ತವಕ, ‍Yuva Manadolindu Seemolanghanada, ಕನ್ನಡ, Kannada, ಸಂಘ ಗೀತ, Sangha Geeta
 

Leave a Reply

Your email address will not be published. Required fields are marked *