ಮಾನವತೆಯ ಮಂಥನಕ್ಕೆ

ಮಾನವತೆಯ ಮಂಥನಕ್ಕೆ ಉಡಿಸಿ ಬಂದ ಮಾಧವ
ರಾಷ್ಟ್ರ ಯಜ್ಞದಗ್ನಿಯಲ್ಲಿ ಉರಿಸಿ ತನ್ನ ಕಾಯವಾ || ಪ ||

ದಣಿವರಿಯದ ಭರತ ಶಕ್ತಿ ಪರಿಧಿಯಿರದ ರಾಷ್ಟ್ರಭಕ್ತಿ
ಈಶ ಕಾರ್ಯಕಾಗಿ ದುಡಿವ ಸ್ವಾರ್ಥರಹಿತ ವ್ಯಕ್ತಿಯಾಗಿ || 1 ||

ಗಾವಳಿರದೆ ಗುರಿ ಗೆಲ್ಲುವ ಹಾದಿ ಹಿಡಿದ ಋಷಿಯಾಗಿ
ಧ್ಯೇಯದೆಡೆಗೆ ಅಣಿಯಾಗುತ ಸಂಯಮದಾ ಗಣಿಯಾಗಿ || 2 ||

ವಿಘ್ನ ವೈರವೆದುರನಂತ ಸಕಲ ನೋವ ನುಂಗಿ ನಿಂತ
ಶತ್ರುಗಳನು ಮಿತ್ರರಾಗಿ ಪರಿವರ್ತಿಸಿ ಗೆದ್ದ ಸಂತ || 3 ||

ಸಾಧನೆಗಳ ಆರೋಹಿ ಲೋಕವ್ಯಾಪಿ ಸನ್ಯಾಸಿ
ಜನರ ಏಕಸೂತ್ರದಲಿ ಹೊಸದು ಬೆಸದ ವಿನ್ಯಾಸಿ || 4 ||

Leave a Reply

Your email address will not be published. Required fields are marked *