ಮಾಧವನುದಿಸಿದ ಮನೆಮನೆಯಲ್ಲಿಯು ಬಾಲಿಕೆಯಾದಳು ರಾಧೆ
ನಿರ್ಮಲ ಪ್ರೇಮದ ವಾತ್ಸಲ್ಯದ ಸುಧೆ ಆದಳು ತಾಯಿ ಯಶೋಧೆ || ಪ ||
ಗೋವಳನೂದಿದ ಸಂಗಮ ಸ್ವರದಲಿ ಹೊಮ್ಮಿತು ಸಮರಸವೇದ
ಕುರುಕುಲದಳಿವಿಗೆ ಮುನ್ನುಡಿ ಬರೆಯಿತು ಮುರಾರಿಯ ಶಂಖದ ನಾದ || 1 ||
ವೀರ ನರನ ರಥ ಸಾರಥಿಯಾದನು, ಕಾರ್ಯದಿ ಮೇಲ್ಕೀಳಿಲ್ಲ
ನಿರ್ಮಮ ಮನದಲಿ ಕರ್ಮದ ಬೋಧನೆ ಫಲದಾಸೆಯು ಎಂದಿಗೂ ಇಲ್ಲ || 2 ||
ಗೀತೆಯ ಬೋಧನೆ ಪಾರ್ಥ ನಿಮಿತ್ತದಿ ಸಾರ್ಥಕ ಬದುಕಿನ ಪಾಠ
ಪಾಂಡವರೈವರೇ ಕೈಯ್ಯಾಯುಧಗಳು ಇಳುಹಿದೆ ಭೂಮಿಯ ಭಾರ || 3 ||
ಸಂಘಟನೆಗೇ ಬಲ ಕಲಿಯುಗದಲ್ಲಿ ಆಗದು ಪುನರವತರಣ
ಪ್ರತಿಶಿಶುವಾಗಲಿ ಕೇಶವನಂತೆಯೇ ಮಾಡಲಿ ಧರ್ಮೋದ್ಧರಣ || 4 ||