ಮಾತೃ ಪೂಜಾತ ಶತ ಜೀವನರ (ಅಸಮಿಯಾ ಗೀತೆ )

ಮಾತೃ ಪೂಜಾತ ಶತ ಜೀವನರ ಅವಿರತ ಸಮಿಧ ದಿಉಂ ಆಹಾ
ಲುಈತರ ಪಾರರೆ ಶಕ್ತಿ ಆಹಾ ಗುರು ಶಂಕರರೆ ಭಕ್ತಿ ಆಹಾ
ಅಖಂಡ ಭಾರತ ಗಢೊಂ ಆಹಾ, ಅಖಂಡ ಭಾರತ ಗಢೊಂ ಆಹಾ ॥ ಪ ॥

ದುರ್ಜಯ ಸಾಹ ದಿಸೆ ಬೀರ ಲಚಿತೆ
ತ್ಯಾಗರ ಭಾವನಾ ದಿಸೆ ಬೀರ ಕುಶಲೆ
ಭೌತಿಕ ಸುಖಮಯ ಮೋಹ ತ್ಯಾಗ ಆಮಿ
ಮುಕ್ತ ಜುಜಾರು ಹೋಈ ಉಲಾಉಂ ಆಹಾ                                     ॥ 1 ॥

ನಿದ್ರಿತ ಕ್ಲಾಂತ ಸಮಾಜಾತ ಆಮಿ
ಉಜ್ವಲ ಜೀವನರ ಜೊವಾರ ಆನೊ
ಪರಮ ವೈಭವರ ಸಪೊನ ಆಜಿಯೆ
ತನು ಮನ ಧನೆರೆ ಪೂರ್ಣ ಕರೊಂ                                                   ॥ 2 ॥

ಕೋಟಿ ಕೋಟಿ ಹಿಂದು ಉಲಾಈ ಆಹಾ
ರಾಷ್ಟ್ರ ಗಢಿಮ ಅಮಿ ಉಲಾಈ ಆಹಾ
ಚಿಂತಾ ಭಯ ದ್ವಿಧಾ ಸಕಲೊಂ ಆತರಾಯಿ
ಆಗುವಾಈ ಆಗುವಾಈ ಜಾಉಂ ಆಹಾ                                            ॥ 3 ॥

ಜಾಗೃತ ಹಿಂದು ಕರಿಸೊಂ ಜೆ ಪಣ
ವಿದೇಶೀಕ ಸಕಲೊಂವೆ ಕರೂ ವರ್ಜನ
ಸಮರ್ಥ ಭಾರತ ಗಢಿಬೊಲೊಈ ಆಜಿ
ಸಕ್ರಿಯ ಹಿಂದು ಹೋಉಂ ಆಹಾ                                                     ॥ 4 ॥

(ವಿ.ಸೂ.: ಸ ಅಕ್ಷರ ಬಂದರೆ ಹ , ವ ಬಂದಲ್ಲಿ ಬ, ಶ ಬಂದರೆ ಖ ಎಂದು ಅಸ್ಸಾಮಿ ಭಾಷೆಯಲ್ಲಿ ಉಚ್ಚರಿಸುತ್ತಾರೆ. ಹಾಡುವಾಗ ಹೇಳಿಕೊಡುವಾಗ ಗಮನಿಸಬೇಕು.)

ಅರ್ಥ: 

ಮಾತೃದೇವಿಯ ಪೂಜೆಯ ಯಜ್ಞದಲ್ಲಿ ನಮ್ಮ ಜೀವನವನ್ನು ಆಹುತಿಯಾಗಿ ಅರ್ಪಿಸೋಣ, ಬೃಹ್ಮಪುತ್ರ ನದಿಯ ತಟದ ಶಕ್ತಿಗಳೆ ಬನ್ನಿ,
ಶಂಕರ ದೇವನ ಭಕ್ತಿ ವೃಂದಗಳೆ ಬನ್ನಿ,
ಅಖಂಡ ಭಾರತ ನಿರ್ಮಾಣ ಮಾಡಲು ಒಂದಾಗಿ ಬನ್ನಿ,
ಅಖಂಡ ಭಾರತ ನಿರ್ಮಾಣ ಮಾಡಲು ಒಂದಾಗಿ ಬನ್ನಿ,

ಶೂರ ಲಚಿತನು ನಮಗೆಲ್ಲಾ ಸಾಹಸ ಮನೋಭಾವ ನೀಡಿದ್ದಾರೆ, ಕೌಶಲ್ಯವುಳ್ಳ ವೀರಕುವರರು ನಮಗೆ ತ್ಯಾಗದ ಅವಶ್ಯ ತಿಳಿಸಿದ್ದಾರೆ, ಭೌತಿಕ ಸುಖದ ಮೋಹವನ್ನು ತ್ಯಾಗಮಾಡಿ, ಮುಕ್ತವಾಗಿ ಪರಾಕ್ರಮ ಮೆರೆಯಲು ಎಲ್ಲಾ ತ್ಯಾಗ ಮಾಡಿ ಬನ್ನಿ.

ನಿಷ್ಕ್ರಿಯವಾದ ಸಮಾಜದಲ್ಲಿ ನಾವೆಲ್ಲ ಸೇರಿ ನಿರ್ದಿಷ್ಟವಾದ ಉತ್ಸಾಹದ ಸಂಚಾರ ಕೈಗೊಳ್ಳೋಣ, ಸಮಾಜದಲ್ಲಿ ಇರುವವರೆಲ್ಲರನ್ನು ತನು,ಮನ,ಧನಗಳಿಂದ ಸಂಘಟಿಸಿ,
ದೇಶದ ಪರಮ ವೈಭವದ ಕನಸನ್ನು ನನಸಾಗಿಸೋಣ
ದೇಶದ ಕೋಟಿ ಕೋಟಿ ಹಿಂದುಗಳಲ್ಲ ಒಂದಾಗಿ ಬನ್ನಿ
ಈ ರಾಷ್ಟ್ರವನ್ನು ವೈಭವೋನ್ನತಿಗೊಳಿಸಲು ಒಗ್ಗೂಡಿ ಬನ್ನಿ
ಚಿಂತೆ ಭಯ ಭೇದಗಳನ್ನು ಎಲ್ಲವನ್ನೂ ಹಿಮ್ಮೆಟ್ಟಿ ಮುಂದೆ ಮುನ್ನುಗ್ಗಿ ಸಾಗಲು ಜೊತೆಯಾಗಿ ಬನ್ನಿ

ಜಾಗೃತ ಹಿಂದುಗಳಾದ ನಾವು ಪ್ರತೀಕ್ಷೆಯಿಂದ ಕಾಯುವ ಕಾಲ
ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ಚಿಂತನೆ ನಿಶ್ಚಯ ಮಾಡಿ
ಇಂದು ಹಿಂದುಗಳೆಲ್ಲ ಭಾರತವನ್ನು ಸಮರ್ಥ ಮಾಡಲು ಸಕ್ರಿಯರಾಗಿ ಮುಂದೆ ಮುನ್ನುಗ್ಗುವ ಅವಶ್ಯಕತೆಯಿದೆ.

ಅಖಂಡ ಭಾರತ ನಿರ್ಮಾಣ ಮಾಡಲು ಒಂದುಗೂಡಿ ಬನ್ನಿ

Leave a Reply

Your email address will not be published. Required fields are marked *

*

code