ಭಾರತ ವರ್ಷದ ಭವ್ಯ ನವೋದಯ

ಭಾರತ ವರ್ಷದ ಭವ್ಯ ನವೋದಯ

ಬಯಸಿದೆ ಶಕ್ತಿಯ ಸಂಗಮವ

ದಾರಿಯ ತೋರಿದ ಧೀರ ಪರಂಪರೆ

ಜಡತೆಯ ನೀಗಿದ ಜಂಗಮವ            || ಪ ||

 

ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ

ಸದ್ದಿಲ್ಲದ ಹುನ್ನಾರವಿದೆ

ಇದ್ದುದನೆಲ್ಲವ ಅಲ್ಲಗಳೆವ ಹಸಿ

ಸಿದ್ಧಾಂತದ ಸಂಘರ್ಷವಿದೆ                || 1 ||

 

ಗಡಿಗಳ ಗುಡಿಗಳ ಒಡೆವಾಯುಧಗಳ

ಮುರಿದಿಕ್ಕುವ ಛಲ ಮೂಡುತಿದೆ

ಕಡಲಿನ ತಡಿ ಹಿಮಶಿಖರದ ನಡುವಿನ

ಧರೆಯೊಡೆತನ ದೃಢವಾಗುತಿದೆ         || 2 ||

 

ಸಾವಿರ ಕೈಗಳು ಒಗ್ಗೂಡಿಹ ಬಲ

ಭಾವೈಕ್ಯದ ನೆಲೆಯಾಗಲಿದೆ

ಸಾವನು ಜಯಿಸಿದ ಭೀಮ ಶಕ್ತಿ ನಿಜ

ದೈವದ ಒಲುಮೆಯ ಗಳಿಸಲಿದೆ          || 3 ||

 

ಜ್ಞಾನ ಶೀಲ ಸಂಘಟನೆ ಸಮುನ್ನತಿ

ಬಂಧುತ್ವದಿ ಜಗ ಜಯಿಸುವೆವು

ಕಾಲನ ಮಣಿಸುವ ಕೋದಂಡದ ಪಡೆ

ನಾಳೆಗಳನು ನಾವಾಳುವೆವು               || 4 ||

 

Leave a Reply

Your email address will not be published. Required fields are marked *

*

code