ಭರತ ಮಾತೆ ಭವ್ಯ ಮಂದಿರ
ದ್ವಾರ ಬಳಿ ನಾ ನಿಂತಿಹೆ
ಉದಿಸಿದ ನೇಸರನ ಜೊತೆಯಲಿ
ಮಾತೃ ಚರಣಕೆ ನಮಿಸುವೆ || ಪ ||
ವಿಶ್ವದೆಲ್ಲೆಡೆ ಶಾಂತಿ ನೆಲೆಸಿದೆ
ತಾಯಿ ಮಕ್ಕಳ ನಡುವಲಿ
ಹಿಂದು ಸಂಸ್ಕೃತಿ ಬೆಳಕ ಹರಡಿದೆ
ಜ್ಞಾನವನು ಪ್ರಜ್ವಲಿಸುತಲಿ || 1 ||
ಗೋವಿನ ಗುಣಗಾನ ಮಾಡುತ
ಗ್ರಾಮ ನೃತ್ಯವು ನಡೆದಿದೆ
ಸಮರಸತೆಯ ಸಹಜ ಭಾವವು
ಎಲ್ಲ ಮನದಲಿ ನೆಲೆಸಿದೆ || 2 ||
ಭೇದಭಾವದ ಖಡ್ಗ ಮುರಿದಿದೆ
ಒಂದೆ ಭಾವವು ಧ್ವನಿಸಿದೆ
ಸೇವೆಯ ತ್ಯಾಗಜೀವನ
ಮಂತ್ರವಾಗುತ ಸಾಗಿದೆ || 3 ||
ನಮ್ಮ ಹೃದಯದಿ ಕೇಶವ
ತಾಯ ಮುಗುಳುನಗೆ ನೋಡಲಿ
ಜಗದ ಒಡಿಲು ಸದಾ ಹೀಗೆ
ನಗುತ ನಗುತ ಸಾಗಲಿ
ನಿತ್ಯ ನೂತನವಾಗಲಿ || 4 ||
ನಮಸ್ತೇ..ಇದರ ಆಡಿಯೋ ಎಲ್ಲಿದ್ದಾವೆ.?