ಬಾಳ ನೌಕೆ ಏರಿ ನಮ್ಮ

ಬಾಳ ನೌಕೆ ಏರಿ ನಮ್ಮ
ಬಾಳ ಪಯಣ ಸಾಗಿದೆ
ಶೀಲ ವಸನ ಹಾಯಿ ಬಿಗಿದು
ಧೈರ್ಯ ಪಥಿಕನಾಗಿದೆ || ಪ ||

ವೀರ ವ್ರತದ ಸ್ತಂಭವೇರಿ
ಧ್ಯೇಯ ಧ್ವಜವು ಹಾರಿದೆ
ಜ್ಞಾನ ಶೌರ್ಯ ತ್ಯಾಗ ಐಕ್ಯ
ಸಂದೇಶವ ಸಾರಿದೆ || 1 ||

ಮರುತನೊದೆತ ಕಡಲ ಮೊರೆತ
ಸೆಳೆತ, ಸುಳಿಗಳಗಣಿತ
ಚಪಲ ಮನವ ಶಮನಗೊಳಿಪ
ಚತುರಮತಿಯೇ ನಾವಿಕ || 2 ||

ಚಿತ್ತ ವೃತ್ತಿ ತಡೆವ ಭಿತ್ತಿ
ಉತ್ತರಮುಖಿ ಹಿರಿಯರು
ಸತ್ಪಥವನು ತೋರಿ ಗತಿಯ
ಸುಸ್ಥಿತಿಯಲಿ ಇಡುವರು || 3 ||

ಮೂಡಣದ ಮೋಡದಾಚೆ
ಬೆಳ್ಳಿ ಕಿರಣ ಮೂಡಿದೆ
ಗುರಿಯ ಸೇರ್ವ ಭರವಸೆಯ
ಬೆಳಕಿನೆಡೆಗೆ ಕರೆದಿದೆ || 4 ||

Leave a Reply

Your email address will not be published. Required fields are marked *