ಬಟ್ಟೆಯಲ್ಲ ಬಣ್ಣವಲ್ಲ – (ರಾಗ : ವಲಚಿ)

ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ
ಹಾರಲೀ ಈ ಧ್ವಜ ತಡೆಗಳ ದಾಟಿ
ಹಾರಲೀ ಈ ಧ್ವಜ ಹಾರಲೀ
ಹಾರಲೀ__ ಹಾರಲೀ__ || ಪ ||

ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ
ಸಾವಿರ ಬಗೆ ಜೀವನಕ್ಕೆ ನೆರಳನಿತ್ತ ಕೀರ್ತಿ
ಇತಿಹಾಸಕ್ಕೂ ಹಿಂದೆ ವಾಲ್ಮೀಕಿಗು ತಂದೆ
ಎನ್ನುವ ಬಿರುದ ಹೊತ್ತ ಘನತೆಯ ಪ್ರತಿಮೂರ್ತಿ || 1 ||
|| ಬಟ್ಟೆಯಲ್ಲ ||

ಈ ಪತಾಕೆ ಅಂತರಂಗ ಧರ್ಮ ಸತ್ಯಗಾಮ
ಬುದ್ಧ ಗಾಂಧಿ ಶಂಕರರ ರಾಮ ಸತ್ಯಕಾಮ
ಗೋಕುಲದ ಗೊಲ್ಲಾ ಗಾಂಡೀವದ ಮಲ್ಲ
ಎಳೆಯಾದರೂ ಈ ಧ್ವಜದಲಿ ಇದೆಕೆಣೆಯೇ ಇಲ್ಲ || 2 ||
|| ಬಟ್ಟೆಯಲ್ಲ ||

Leave a Reply

Your email address will not be published. Required fields are marked *

*

code