ಪುಣ್ಯಭೂಮಿಯಲಿ ಧ್ಯೇಯದ ಗುಡಿಯು

ಪುಣ್ಯಭೂಮಿಯಲಿ ಧ್ಯೇಯದ ಗುಡಿಯು

ಗುಡಿಯಲಿ ಅರಳಿವೆ ಅಸಂಖ್ಯ ಸುಮವು

ನಡೆದಿದೆ ರಾಷ್ಟ್ರದ ಅರ್ಚನೆಯು               || ಪ ||

 

ಈಶನ ಕಾರ್ಯಕೆ ಜನಿಸಿದ ಕಾಯ

ತುಂಬಿದೆ ಸೋಲರಿಯದ ಬಲ ಧೈರ್ಯ

ಧಮನಿ ಧಮನಿಯಲಿ ಹರಿದಿದೆ ಶೌರ್ಯ

ನಾಡ ರಕ್ಷಣೆಗೆ ಅನುದಿನವು                    || 1 ||

 

ಜಗ ತಲೆಬಾಗುವ ಶೀಲದ ನಡತೆ

ಜನಮನ ಬೆಳಗುವ ಜ್ಞಾನದ ಹಣತೆ

ಸಂಚಯ ನವನೇತೃತ್ವದ ಕ್ಷಮತೆ

ಅಮಿತೋತ್ಸಾಹದಿ ಕ್ಷಣಕ್ಷಣವು                || 2 ||

 

ಅಂಜದೆ ಸವಾಲುಗಳ ಸ್ವೀಕರಿಸಿ

ಗೆಲ್ಲುವ ಛಲ ವೀರವ್ರತ ಧರಿಸಿ

ಧ್ಯೇಯ ಮಾರ್ಗದಿ ಶ್ರದ್ಧೆಯ ಸ್ಫುರಿಸಿ

ಘನಿಸಿದೆ ಮನದೊಳಚಲ ನಿಲುವು             || 3 ||

 

ಸಂಘದ ಮಂತ್ರವೆ ಜೀವನಯಾನ

ಗುರಿ ತಲುಪಲು ಮುಡಿಪಾಗಿಹ ಜೀವನ

ದೇವನೆ ಆಶೀರ್ವದಿಸಿಹ ತನುಮನ

ರಾಷ್ಟ್ರೋನ್ನತಿಗೆ ಸಮರ್ಪಿತವು                || 4 ||

Leave a Reply

Your email address will not be published. Required fields are marked *