ಧ್ಯೇಯ ಸಾಧಕನ ದಾರಿ

ಧ್ಯೇಯ ಸಾಧಕನ ದಾರಿ
ಸರಳ ಸುಂದರ ಸರಿ
ಬದುಕಿನಾ ಸಮಯವಾ
ಸವೆದಿಹುದು ಇಲ್ಲಿ || ಪ ||

ಭಾರತದ ಹಿರಿಮೆಯ
ಮರೆತಿರುವ ಸಮಾಜವ
ಬಡಿದೆಬ್ಬಿಸುವಾ ಕಾರ್ಯ
ಹಗಲಿರುಳು ನಡೆದಿದೆ || 1 ||

ಸಂಘಟನೆಯ ಮಂತ್ರದಿ
ಶತಮಾನದ ಹೊಸ್ತಿಲಲಿ
ದೇಶ ವ್ಯಾಪ್ತವಾಗುವ ಕಾರ್ಯ
ನಡೆದಿದೆ ನಿತ್ಯ ನಿರುತದಿ || 2 ||

ತಾಳ್ಮೆಗೊಂದು ಮಿತಿಯಿರಲಿ
ಢೋಂಗೀವಾದಿತನಕೆ
ಸೆಡ್ಡು ಹೊಡೆಯುವ ದಿನಕೆ
ಸಿದ್ಧವಾಗಿದೆ ಭೂಮಿಕೆ || 3 ||

Leave a Reply

Your email address will not be published. Required fields are marked *