ದಕ್ಷತೆಯಿಂದಲಿ ರಕ್ಷೆಯ ಕಟ್ಟುವ ಹಿರಿಮೆಯ

ದಕ್ಷತೆಯಿಂದಲಿ ರಕ್ಷೆಯ ಕಟ್ಟುವ ಹಿರಿಮೆಯ
ನೆನಪಿಸುತ ಇದರೊಲುಮೆಯ ಗಮನಿಸುತ |
ಅಕ್ಷಯವಾಗಲಿ ಲಕ್ಷ್ಮಣ ಪ್ರೀತಿಯು
ಸಮರಸ ಮೆರೆಯಲಿದೋ ಜಗವನೆ ಬೆಳಗಲಿದೋ  || ಪ ||
 
ಮೇಲು-ಕೀಳಿನ ಭೇದವ ಮರೆಯುವ
ಬಡವ-ಬಲ್ಲಿದ ಭಾವವ ನೀಗುವ
ಪಂಡಿತ-ಪಾಮರ ತರತಮ ತೊರೆಯುವ
ಜಾತಿ ಧರ್ಮವ ಮರೆಯುತ ಒಲವಲಿ ಕಟ್ಟುವ ಕೈಗಳಿಗೇ…ತಟ್ಟಲಿ ಮನಗಳಿಗೆ || 1 ||
 
ಪುರಾಣದಿಂದಲೂ ರಕ್ಷೆಯ ಮಹಿಮೆ ಚರಿತೆಯಲೂ ಇದೆ ಇದರದೇ ಹಿರಿಮೆ
ಸೋದರ ಭಾವವು ಸೋದರಿ ರಕ್ಷಣೆ
ಇಂದಿನ ದಿನದೀ ಎಲ್ಲರ ಭದ್ರತೆ ನಮದದು ಹೊಣೆಯಾಗೀ..ರಕ್ಷೆಗೆ ಎಣೆಯಾಗೀ || 2 ||
 
ಸಮಾಜ ಪುಷ್ಟಿಯು ದೇಶದ ಶಕ್ತಿಯು ಸಮರಸವಿದ್ದರೆ ನಿಲ್ಲನು ವೈರಿಯು
ಜತೆಯಲಿ ನಡೆಯುವ ಜತೆಯಲಿ ನುಡಿಯುವ
ದೇಶದ ರಕ್ಷಣೆ ರಕ್ಷೆಯ ಕಲ್ಪನೆ ಜತೆಯಲಿ ಸಾಗೋಣಾ ದೇಶವ ಕಟ್ಟೋಣಾ || 3 ||

Leave a Reply

Your email address will not be published. Required fields are marked *

*

code