ತುಂಬು ತುಂಬು ತುಂಬಿಕೊ | ಜ್ಞಾನ ಕುಂಭ ತುಂಬಿಕೋ || ಪ ||
ನಗುವ ಹೂವೆ ನಿನ್ನ ಗುರು | ಹೊಳೆವ ತಾರೆ ನಿನಗೆ ಗುರು |
ಉಲಿವ ಖಗವೆ ನಿನ್ನ ಗುರು | ಕಡಲ ಕುಣಿತ ನಿನಗೆ ಗುರು |
ತೆರೆದ ಕಣ್ಣಿನಿಂದ ನೀನು ತುಂಬು ತುಂಬಿಕೋ || 1 ||
ಜ್ಞಾನ ನಿಧಿಯೇ ನಿನ್ನ ಗುರು | ತ್ಯಾಗ ಜೀವಿ ನಿನಗೆ ಗುರು |
ತಿಳಿವ ಹಸಿವೆ ನಿನ್ನ ಗುರು | ದುಡಿವ ಹುಚ್ಚೆ ನಿನಗೆ ಗುರು |
ಹುಚ್ಚು ಮನದ ಹತ್ತು ಮೊಗದಿ ತುಂಬು ತುಂಬಿಕೋ || 2 ||
ಬೀಸೋ ಗಾಳಿ ನಿನ್ನ ಗುರು | ಉರಿವ ಅಗ್ನಿ ನಿನಗೆ ಗುರು |
ಹರಿವ ನದಿಯೇ ನಿನ್ನ ಗುರು | ಹಸಿರು ಮರವೇ ನಿನಗೆ ಗುರು |
ಕಲಿವ ತುಡಿತದಿಂದ ನೀನು ತುಂಬು ತುಂಬಿಕೋ || 3 ||
ಹೆತ್ತ ಅಮ್ಮ ನಿನ್ನ ಗುರು | ಹೊತ್ತ ತಾಯಿ ನಿನಗೆ ಗುರು |
ಪಡೆದ ತಂದೆ ನಿನ್ನ ಗುರು | ನಿನಗೆ ನೀನೆ ನಿನ್ನ ಗುರು |
ಎಂಬ ಸತ್ಯವನ್ನು ಅರಿತು ತುಂಬು ತುಂಬಿಕೋ || 4 ||
ಹೇಡಿತನದ ಹೆಡೆಯ ಮೆಟ್ಟಿ | ನನ್ನ ತನಕೆ ಇಂಬು ಗೊಟ್ಟು |
ನಾಡಸೇವೆ ಕಡಗ ತೊಟ್ಟು | ಸಫಲ ಜೀವ ಕುಂಭ ಪಿಡಿದು |
ವೀರನಾಗಿ ಧೀರನಾಗಿ ತುಂಬು ತುಂಬಿಕೋ || 5 ||
(ಗುರುಕುಲ ಪ್ರವೇಶ ಸಂದರ್ಭದಲ್ಲಿ ಮಕ್ಕಳಿಗೆ ಹಿರಿಯರ ಶುಭಸಂದೇಶ)
ಆಡಿಯೋ ಇದ್ದರೆ ದಯವಿಟ್ಟು ಇದರಲ್ಲಿ ಹಾಕಿ
ಸದ್ಯದಲ್ಲಿ ನಿರೀಕ್ಷಿಸಬಹುದು..