ತರುಣರೆಲ್ಲ ಒಂದು ಗೂಡಿ

ತರುಣರೆಲ್ಲ ಒಂದು ಗೂಡಿ ತಂಡ ಕಟ್ಟೋಣ
ಗ್ರಾಮದಲ್ಲಿ ರಾಮರಾಜ್ಯ ಕನಸು ಬಿತ್ತೋಣ
ತಂಡ ಕಟ್ಟೋಣ ನಾವು ಕನಸು ಬಿತ್ತೋಣ
ಸ್ವಾಭಿಮಾನ ಪೂರ್ಣ ಭವ್ಯ ರಾಷ್ಟ್ರ ಕಟ್ಟೋಣ || ಪ ||

ಜಲಮೂಲವ ನದಿಕೆರೆಗಳ ಕಲುಷಗೊಳಿಸದೆ
ನೆಲದೊಡತಿಗೆ ಹಸಿರು ಬಣ್ಣ ದುಡುಗೆ ನೀಡೋಣ
ರಸಗೊಬ್ಬರ ಹೆಸರಿನಲ್ಲಿ ವಿಷವನುಣಿಸದೆ
ಸಾವಯವದ ಸ್ವಾವಲಂಬಿ ಕೃಷಿಯ ಮಾಡೋಣ || 1 ||

ಎಳೆಮನದಲಿ ನೆಲದೊಲವಿನ ಬೀಜಬಿತ್ತೋಣ
ಯುವಜನರಲಿ ಛಲತುಂಬುತ ಗೆಲುವ ಗಳಿಸೋಣ
ಜಾತಿ ದ್ವೇಷ ಭೇದಭಾವ ದೂರ ಗೊಳಿಸುತ
ಬಂಧುತ್ವದ ಸವಿ ಅಮೃತ ಧಾರೆ ಹರಿಸೋಣ || 2 ||

ನಮ್ಮೂರಿದು ನಮ್ಮ ದೇಶ ನಮ್ಮದೇ ಮನೆ
ನುಡಿ ಸಂಸ್ಕೃತಿ ರಕ್ಷಣೆಯದು ನಮ್ಮದೇ ಹೊಣೆ
ಟೋಳಿ ಕಟ್ಟೋಣ ಜಯದ ಹೋಳಿ ಆಡೋಣ
ರಾಮರಾಜ್ಯ ಕನಸೇನಿದೆ ನನಸು ಮಾಡೋಣ || 3 ||

Leave a Reply

Your email address will not be published. Required fields are marked *