ಗ್ರಾಮದ ಕಡೆಗೆ ಸಾಗೋಣ

ಗ್ರಾಮದ ಕಡೆಗೆ ಸಾಗೋಣ ಗ್ರಾಮ ವಿಕಾಸ ಗೈಯೋಣ
ರಾಮ ರಾಜ್ಯವ ರಚಿಸೋಣ ಸಮರಸ ಭಾರತ ಕಟ್ಟೋಣ || ಪ ||

ಉಣ್ಣುವುದಕ್ಕೆ ಅನ್ನವನ್ನಿತ್ತ ಮಣ್ಣ ಸೇವೆ ದಿನ ದಿನ ಗೈಯುತ್ತ
ನೊರೆ ನೊರೆ ಹಾಲಿನ ಅಮೃತ ವಿತ್ತ ನಲ್ಮೆಯ ಆಕಳ ಮೈದಡವುತ್ತಾ
ಅಂಬಾ ಎನ್ನುವ ಆ ಧ್ವನಿಗೆ……… ದೇವರು ಬರುವನು ಈ ಭೂಮಿಗೆ || 1 ||

ಮನ ಮನೆ ಮುಂದಿನ ಅಂಗಳದಿಂದ ಮೂಡುತಿದೆ ರಂಗೋಲಿ ಚಂದ
ಊರೆಜಮಾನರ ಹಿರಿನುಡಿಯಿಂದ ಕೂಡುತಿದೆ ಜನಮನ ಸಂಬಂಧ
ಕಾಯಕದಲ್ಲಿ ಆನಂದ………. ಹಳ್ಳಿಯ ಜೀವನ ಮಕರಂದ || 2 ||

ನ್ಯಾಯವ ನೀತಿಯ ಗೌರವಿಸಿ ವಿವಾದವಿಲ್ಲದೆ ಬದುಕುವೆವು
ನೀರಿಗೆ ಮಸಣಕೆ ಮಂದಿರಕೆ ಭೇದವನೆಣಿಸದೆ ನಡೆಯುವೆವು
ಸ್ವಾವಲಂಬನದ ಜೀವನವು…….. ನಮ್ಮಯ ಗ್ರಾಮದ ಅನುದಿನವು || 3 ||

Leave a Reply

Your email address will not be published. Required fields are marked *