ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ
ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ ||
ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ
ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ
ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ
ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ
ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ ||
ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು
ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು
ನಗು ನಗುತಾ ಇಂದು ನಾವು ಕಷ್ಟವೆಲ್ಲ ಸಹಿಸುವಾ
ದೇಶಕಾಗಿ ನಾವು ನಮ್ಮ ಜೀವನವ ಸವೆಸುವಾ
ನಮ್ಮ ರಾಷ್ಟ್ರ ಅದರ ಭಾಗ್ಯ ನಮ್ಮದೆಂದು ಭಾವಿಸುವಾ || ಶಕ್ತಿ ಮೀರಿ ||
(“ಸಂಘಟನ್ ಗಡೇ ಚಲೋ” ಹಿಂದಿ ಹಾಡಿನ ಅನುವಾದ)