ಏಳಿ ತರುಣ ಸೋದರರೇ

ಏಳಿ ತರುಣ ಸೋದರರೇ ತೊಡೆದು ಜಡತೆ ಗೀಳನು
ಎಳೆವ ಬನ್ನಿ ಭರತ ಮಾತೆ ಕುಳಿತ ರಾಷ್ಟ್ರ ತೇರನು || ಪ ||

ಆಧುನಿಕತೆ ಆಡಂಬರ ಉಸಿರ ಕಸಿವ ಆವರ್ತನ
ಸಿಲುಕಿ ಸೋತು ನರಳದಿರಲಿ, ಬಡಿದೆಬ್ಬಿಸಿ ಚೇತನ
ಬಳಲಿಬೆಂದ ಬಂಧುಗಳಿಗೆ ನೀಡಿ ಹೃದಯ ಸ್ಪಂದನ
ಏಕತೆಯಲಿ ಬಾಳಲದುವೆ ಹಿಂದು ಸುಧೆಯ ಮಂಥನ || 1 ||

ನೋಡಿ ನಿಮ್ಮ ನಗುವರಿರಲಿ ದೂರ ಸರಿಸಿ ಅಂಜಿಕೆ
ಸಂಸಾರದ ಗ್ರಂಥಕವರ ಬಿಡದೆ ಮಾಡಿ ಸಂಚಿಕೆ
ಕಾರ್ಯವಿದು ವ್ಯರ್ಥವಲ್ಲ ವಿಜಯಕದುವೆ ಕಂಟಿಕೆ
ಮನುಜ ಕುಲವ ಸಮರಸದಿ ಬೆಸೆವ ಕಠಿಣ ಕೊಂಡಿಕೆ || 2 ||

ಸಿಂಧು ಮಡಿಲ ಸಂತರುಲಿದ ವಾಣಿಗಳನು ತಿಳಿಯುವ
ಕಲಿತು ಕಲಿಸಿ ಗೆಳೆಯರೊಡನೆ ಕರವ ಬೆಸೆದು ನಿಲ್ಲುವ
ನೆನೆದು ವೀರಪುತ್ರರನ್ನು ತ್ಯಾಗ ಶೌರ್ಯ ಮೆರೆಯುವ
ಬಿಡದೆ ಛಲವ ರಾಷ್ಟ್ರರಥವ ಕೀರ್ತಿಪಥಕೆ ಒಯ್ಯುವ || 3 ||

Leave a Reply

Your email address will not be published. Required fields are marked *

*

code