ಎದ್ದು ನಿಲ್ಲು ವೀರ

ಎದ್ದು ನಿಲ್ಲು ವೀರ, ದೇಶ ಕರೆದಿದೆ
ಪಡೆಯ ಕಟ್ಟು ಧೀರ, ಸಮರ ಕಾದಿದೆ
ರಣ ಕಹಳೆಯ ಹೂಂಕಾರದ ಸದ್ದು ಮೊರೆದಿದೆ
ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ                             || ಪ ||

ಗಡಚಿಕ್ಕುವ ಆಕ್ರಂದನ ನರಳಾಟ ಚೀರಾಟ
ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮುಂದಕೆ
ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ
ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ || 1 ||

ಹೆಜ್ಜೆ ಹೆಜ್ಜೆ ತುಳಿತಕೆ ನೆಲದೆದೆಯ ಕಂಪನ
ಮುಂದೆ ಮುಂದೆ ಧಾವಿಸೆ ಕೇಳಿ ವಿಜಯ ಸ್ಪಂದನ
ಎದೆತಟ್ಟಿ ತೊಡೆ ತಟ್ಟಿ ಅಬ್ಬರಿಸುತ ಚಲಿಸಲಿ
ವೈರಿ ಶಿಬಿರ ತತ್ತರಿಸುವ ಅಗ್ನಿಜ್ವಾಲೆ ಉಜ್ವಲ                || 2 ||

ತಾಯಿಯ ಕರೆ ಮೊಳಗಿದೆ ಹೃದಯದೀಪ ಬೆಳಗಿದೆ
ಶಕ್ತಿಧೂಪ ಹರಡಿದೆ ದಿಗಂತದೆತ್ತರ
ಸ್ವಾತಂತ್ರದ ಕರೆಯಲಿ ರಾಷ್ಟ್ರಪುರುಷ ಪೂಜೆಗೆ
ಉರಿಯುತಿರಲಿ ಕಾಂತಿದುಂಬಿ ತ್ಯಾಗದೀಪದಾರತಿ      || 3 ||

Leave a Reply

Your email address will not be published. Required fields are marked *

*

code