ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ
ಮುದದಲಿ ಆರತಿ ಬೆಳಗುತ
ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ ||
ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ
ರವಿ ಶಶಿ ಭೂಮಿಗೆ ಬಾಗಿ
ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 ||
ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ
ರಸಋಷಿ ಕವಿಗೂ ಮಾತೇ
ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 ||
ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ
ಗೋಪಬಾಲಗೋಮಾತೆ
ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 3 ||
ಹಳ್ಳಿಯ ಪರಿಸರವ ಎಂದೂ ಶುಚಿಯಾಗಿರಿಸುವೆವೂ
ಕಸವನೆ ರಸವನು ಮಾಡಿ
ಗ್ರಾಮವ ಬೆಳೆಸುವೆವು ಆರತಿ ಬೆಳಗುವೆವು || 4 ||
ನಿನ್ನ ಚರಣದಲ್ಲಿ, ನಾವು ಪಣವನು ತೊಡುತಿಹೆವು
ಕೃಷಿಯನ್ನು ತೊರೆಯದೆ ಎಂದೂ
ಗೋವನು ಕಾಯುವೆವು, ಆರತಿ ಬೆಳಗುವೆವು || 5 ||