ಅಳಿಸಿ ದೋಷವನುಳಿಸಿ ದೇಶವ
ಗಳಿಸಿ ಪೌರುಷ ತೇಜವ
ಬೆಳೆಸುವೆವು ಹಿಂದುತ್ವದೋಜವ
ಕಳಚಿಕೊಳ್ಳುತ ಜಾಡ್ಯವ…
ಕಳಚಿಕೊಳ್ಳುತ ಜಾಡ್ಯವ || ಪ ||
ಒತ್ತಿಬರುತಿಹ ದಾಸ್ಯತೆಯ ಕಾರ್
ಗತ್ತಲನು ಶಿವಭೂಪರು
ಸುತ್ತಮುತ್ತಿಹ ಮೊಗಲ ಛಾಯೆಯ
ಕತ್ತರಿಸುತಲಿ ರಾಣರು
ಹೆತ್ತಸುತರಾತ್ಮಾರ್ಪಣೆಗೆ ತಾ
ನಿತ್ತ ಗುರುಗೋವಿಂದರು
ಎತ್ತರಿಸಿ ಗರ್ಜಿಸುತಲಿರುವರು
ಕಿತ್ತುಬಿಸುಡಿರಿ ಜಾಡ್ಯವ
ಕಿತ್ತು ಬಿಸುಡಿರಿ ಜಾಡ್ಯವ ….|| 1 ||
ವ್ಯಾಸಭಾಸರ ಕಾಳಿದಾಸರ
ನಾಸೆಯಿಂದಲಿಓದುತ..
ವಾಸುದೇವರ ತಿಲಕ ಲಾಲರ
ಬೋಸದಾಸರನರಿಯುತ
ಏಸು ಜನಮವನೆತ್ತಿ ಬಂದರು
ಮಾಸದಿರುವೆಮಚರಿತೆಯ
ಮೋಸದಿಂದಲಿ ತಿರುಚಿ ರಚಿಸಿಹ
ದೋಷಿಗಳ ನೀ ನೋಡೆಯ…
ದೋಷಿಗಳ ನೀ ನೋಡೆಯ…|| 2 ||
ಕೇಶವನು ಭಾರತದ ಪಥನಿರ್
ದೇಶವನು ತಾ ಮಾಡುತ
ದೇಶಮುಕ್ತತೆ ನಂತರದ ನಮ
ದೋಷ ಸಕಲವ ಕಾಣುತ
ಭಾಷೆಮತಕುಲಹಿರಿಮೆಗರಿಮೆಯ
ಪಾಶಗಳ ಕಿತ್ತೊಗೆಯುತ
ಆಶೆಯಿಂದಲಿ ಸಂಘಕಾರ್ಯವ
ಮಾಳ್ಪ ಮಂತ್ರವ ನೀಡುತ
ವಿಶ್ವಗುರುವನು ಮಾಡುತ.. || 3 ||