ಅಂದು ನೀ ಕಂಡ ಕನಸು

ಅಂದು ನೀ ಕಂಡ ಕನಸು ಇಂದು ಹೆಮ್ಮರವಾಗಿ
ಸಂಘರೂಪದಿ ನಿಂದು ಫಲವೀಯುತಿಹುದು
ಧರ್ಮದ ನೆಲೆಯಲ್ಲಿ ದೇಶವೆಂಬ ನಿಲುವ
ಹೊತ್ತಿದ್ದ ನನ್ನ ಕನಸು ನನಸಾಯಿತಿಂದು || ಪ ||

ರಾಷ್ಟ್ರದ ಭವಿತವ್ಯ ಯುವಕರ ಕೈಲೆಂದು
ಸಾರಿದ ನಿನ್ನ ಊಹೆ ನಿಜವಾಯಿತಿಂದು
ಎಂತೆಂಥ ಕಷ್ಟಗಳು ರಾಷ್ಟ್ರಕೇ ಒದಗಿದರೂ
ರಾಷ್ಟ್ರೀಯರೇ ನಿಂದು ಪರಿಹರಿಸುತಿಹರು || 1 ||

ನೀನೊಬ್ಬ ದ್ರಷ್ಟಾರ ಮಾಡಿದೆ ಉದ್ಗಾರ
ಭರತಮಾತೆಯ ಸುತರು ರಾಷ್ಟ್ರೀಯರೆಂದು
ಒಬ್ಬೊಬ್ಬ ರಾಷ್ಟ್ರೀಯ ಸ್ವಯಂಸೇವಕನೆಂದು
ನೀನು ಕೊಟ್ಟ ವ್ರತದೀಕ್ಷೆ ಅಜರಾಮರ || 2 ||

ಪ್ರತಿಯೊಬ್ಬ ಬಂಧುವನೂ ಪ್ರೇರಿಸಿ ಕರೆತಂದು
ಬೆಳಕಿತ್ತು ನಡೆಸಿದ ಗುರಿಯೆಡೆಗೆ ಅಂದು
ನೀ ತೋರ್ದ ಆ ದಾರಿ ಏಕಮೇವ ರಹದಾರಿ
ಕೇಶವನೆ ನೀನಾದೆ ಸಫಲತೆಯ ರೂವಾರಿ || 3 ||

Leave a Reply

Your email address will not be published. Required fields are marked *