ತೋಳೆತ್ತಿ ನಮಿಸುವೆ ಭಗವಾ ಗುಡಿಗೆ

ತೋಳೆತ್ತಿ ನಮಿಸುವೆ ಭಗವಾ ಗುಡಿಗೆ
ಗುರಿಯಿದೆ ಸನ್ನಿಹಿತ ಅಡಿಗಡಿಗೆ || ಪ ||

ಹಿಮಗಿರಿ ತಪ್ಪಲ ಮಂಜಿನಲಿ
ಸಾಗರ ತಡಿಯ ಮರಳಿನಲಿ
ಮುಂಜಾನೆ ಮೂಡುವ ನಸುಕಿನಲಿ
ಸಂಜೆಯ ಕೆಂಪಿನ ಮುಸುಕಿನಲಿ || ಹೋಯಾ, ಓಯಾ ||
ಸಂಘಸ್ಥಾನದ ಮಣ್ಣಿನ ಕಣದಲ್ಲಿ
ಉಸಿರಾಡಿ ಹೊರಳಾಡಿ ಕರುಳಾಡಿ
ಒಡನಾಡಿ ಬೆಳೆಸಿದ ಕಾರ್ಯದಲಿ || 1 ||

ಸಂಘರ್ಷ ಹಾದಿಯ ತುಳಿದವರು
ಗೀತೆಯ ಸ್ಫೂರ್ತಿಗೆ ಬೆಳೆದವರು
ಸೋಲಿನ ಇತಿಹಾಸ ತೊಳೆದವರು
ಆಲಸ್ಯ ಕೆಡವಿ ಬೆಳೆದವರು || ಓಯಾ ||
ಹಿಂದುಸ್ಥಾನದಿ ಕಸುವೆಲ್ಲ ಬಿಸಿಯಾಗಿ
ನಿದಿರೆಯು ಮದಿರೆಯು ಬೆದರುತ್ತಾ
ಸಗ್ಗವು ಧರೆಗೆ ಅವತರಿಸಿ || 2 ||

ಹಿಂದಿನ ನೋವನು ಮರೆಸಿಹೆವು
ಧ್ಯೇಯದ ದೇಹ ಧರಿಸಿಹೆವು
ಧೈರ್ಯಕೆ ಶೌರ್ಯ ಬೆರೆಸಿಹೆವು
ಆದರ್ಶ ಧರೆಗೆ ತರಿಸಿಹೆವು || ಓಯಾ ||
ಉಗಮಸ್ಥಾನದಿ ಉತ್ಥಾನ ಛಲದಲಿ
ಜಗದಲಿ ಭಾರತಿ ಮೊಗದಲಿ
ಚಿನ್ಮಯ ನಗುವಿನ ಮೊಗ್ಗಿಹುದು || 3 ||

Leave a Reply

Your email address will not be published. Required fields are marked *