ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ

ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ
ನಿನ್ನ ಪಾದಾರ್ಚನೆಗೆ ಸವೆಯುತಿದ್ದೆ
ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ
ಪಾದ ಪೂಜೆಯ ಸಮಯ ಬಳಿ ಸೇರುತಿದ್ದೆ || ಪ ||

ನಿನ್ನ ಭಜಿಸುವ ದುಂಬಿ ನಾನಾಗಿ ಜನಿಸಿದರೆ
ಪದಕಮಲ ಮಕರಂದ ಹೀರುತಿದ್ದೆ
ನೀ ನಡೆವ ಮಾರ್ಗದಲಿ ನಾನು ಜನಿಸಿದರಾಗ
ನಿನ್ನ ಪದ ಧೂಳಿಯಲಿ ಹೊರಳಾಡುತಿದ್ದೆ || 1 ||

ಯಾವೊಂದು ನದಿಯಲ್ಲಿ ನೀರಾಗಿ ಜನಿಸಿದರೆ
ನಿನ್ನ ಪದ ತೊಳೆವಲ್ಲಿ ನಾನೊದಗುತಿದ್ದೆ
ನಿನ್ನ ನಿಜ ಭಕ್ತನು ನಾನಾಗಿ ಜನಿಸಿದರೆ
ನಿನ್ನ ಪದಕಮಲದಲಿ ಮೈಮರೆಯುತಿದ್ದೆ || 2 ||

Leave a Reply

Your email address will not be published. Required fields are marked *