ಶಿವ ಸುಂದರ ಭಾರತದ ಪುಣ್ಯನೆಲ

ಶಿವ ಸುಂದರ ಭಾರತದ ಪುಣ್ಯನೆಲ
ಸಂಜೀವಿನಿ ತೀರ್ಥಗಳೇ ಎಲ್ಲ ಜಲ || ಪ ||

ಧರ್ಮಘೋಷ ಉಸಿರಾಡುವ ಗಾಳಿಯಾಗಿದೆ
ಸಹನೆಮಂತ್ರ ಬಾಳಿನಲ್ಲಿ ಬೆರೆತುಹೋಗಿದೆ
ಬೆಟ್ಟ ಬೆಟ್ಟದಲ್ಲೂ ಕರೆವ ಗುಡಿಯ ಗೋಪುರ
ಹತ್ತಿ ಇಳಿವ ಭಕ್ತಜನಕೆ ಸಹಜ ಸುಂದರ || 1 ||

ಉತ್ತರದಲಿ ಹಿಮಾಲಯದ ಗಿರಿಯ ಉನ್ನತಿ
ದಕ್ಷಿಣದಲಿ ಅಲೆ ಅಲೆಗಳ ಕಡಲಿನಾಕೃತಿ
ನಡುವೆ ಸಾವಿರಾರು ವರುಷ ಬೆಳೆದ ಸಂಸ್ಕೃತಿ
ಇದೇ ನಮ್ಮ ಭಾರತಾಂಬೆ ಚೆಲುವಿನಾಕೃತಿ || 2 ||

ದಿವ್ಯಪುರುಷರಿತ್ತ ಜ್ಞಾನಜ್ಯೋತಿ ಬೆಳಗಿದೆ
ಶಾಂತಿ ಸ್ನೇಹ ಸೌಹಾರ್ದದ ಕಂಪು ಹರಡಿದೆ
ದೈವ ಹರಸಿಕೊಟ್ಟ ಆತ್ಮಶಕ್ತಿ ಇಲ್ಲಿದೆ
ನಾವು ಭಾರತೀಯರೆಂಬ ಹೆಮ್ಮೆ ನಮಗಿದೆ || 3 ||

Leave a Reply

Your email address will not be published. Required fields are marked *