ಸಮಾಜವೇ ನಮ್ಮ ಆರಾಧ್ಯದೈವವು, ಸೇವೆಯೆ ನಿಜ ಆರಾಧನಾ
ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ |
ಸಹಕಾರತತ್ವವೆ ಸಾಧನಾ || ಪ ||
ಸಮಾಜದಿಂದಲೆ ಸಂಸ್ಕೃತಿಯೆನ್ನುವ ಘನನಿಧಿ ನಮಗೆ ದೊರಕಿಹುದು
ಧನ, ಜ್ಞಾನದ ಬೆಲೆ ಬಾಳುವ ಗಣಿಯು ಸಮಾಜದಿಂದಲೆ ಲಭಿಸುಹುದು
ಸಮಾಜ ಋಣದಿಂ ಮುಕ್ತರಾಗಲು, ಪಡೆದುದ ಮರಳಿ ನೀಡೋಣ
ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ |
ಸಹಕಾರತತ್ವವೆ ಸಾಧನಾ || 1 ||
ಸದವಕಾಶ ಎಲ್ಲರಿಗೂ ಸಿಗಲಿ ಉಪೇಕ್ಷಿತರಾರೂ ಇರದಿರಲಿ
ಶಿಕ್ಷಣ, ಸ್ವಾಸ್ಥ್ಯ, ಸುಸಂಸ್ಕೃತಿ ಪಡೆದು, ಸಮರ್ಥ ಸುರಕ್ಷಿತವಾಗಿರಲಿ
ದಯೆಯಲ್ಲವು, ಉಪಕಾರವಲ್ಲವಿದು, ಆತ್ಮೀಯತೆಯ ಭಾವನಾ
ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರತತ್ವವೆ ಸಾಧನಾ |
ಸಹಕಾರತತ್ವವೆ ಸಾಧನಾ || 2 ||
ಭಾಷೆ, ಪ್ರಾಂತ್ಯ, ಜಾಶಿಯು ಬೇರಾದರೂ, ಭಾರತಮಾತೆಯ ಮಕ್ಕಳೆಲ್ಲಾ
ಗ್ರಾಮ, ನಗರ, ವನವಾಸಿಮನುಜರು, ಬಂಧುಗಳಂತೆಯೆ ನಾವೆಲ್ಲಾ
ಜನತೆಯ ಸುಖದಲ್ಲಿಯೆ ಇದೆಯೆಲ್ಲವು, ಸಮಾಜ ಸುಖದಾಧಾರಣಾ
ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರತತ್ವವೆ ಸಾಧನಾ |
ಸಹಕಾರತತ್ವವೆ ಸಾಧನಾ || 3 ||
I want download all Kannada songs
Please help me