ರಕ್ಷೆಯನು ಕಟ್ಟುತ್ತ ಕರಪಿಡಿದು ನಡೆಯೋಣ
ಒಂದಾಗಿ ನಿಲ್ಲೋಣ ರಾಷ್ಟ್ರರಕ್ಷಣೆಗಿಂದು || ಪ ||
ಸ್ನೇಹದ ಕಂಪನ್ನು ಪಸರಿಸುವ ರಕ್ಷೆ
ನೋವ ಮರೆಸುತ ಧೈರ್ಯ ತುಂಬುವಾ ರಕ್ಷೆ
ಒಡೆದ ಮನಸುಗಳ ಒಂದುಗೂಡಿಸೆ ರಕ್ಷೆ
ಸಂಬಂಧಗಳನುಬಂಧ ಬೆಸೆಯುವುದೀ ರಕ್ಷೆ || 1 ||
ಇತಿಹಾಸ ನೆನಪಿಸಲು ಕಾಲನೇ ರಕ್ಷೆ
ಗುರಿಯೆಡೆಗೆ ನಡೆಯಲು ನಕ್ಷೆಯೇ ರಕ್ಷೆ
ಮೇಲುಕೀಳುಗಳ ಅಳಿಸೆ ಆಯುಧವು ರಕ್ಷೆ
ಎಲ್ಲರೂ ಒಂದೆಂಬ ಭಾವವೀ ರಕ್ಷೆ || 2 ||
ತಾಯ ರಕ್ಷಣೆಗೆ ಸಿದ್ಧಕಂಕಣವು ರಕ್ಷೆ
ರಾಷ್ಟ್ರರಕ್ಷಣೆಯ ಮನವಕೊದುವಿದಿದೋ ರಕ್ಷೆ
ಅವಗುಣವ ಬದಿಗೊತ್ತೆ ಸದ್ಗುಣಕಿದು ರಕ್ಷೆ
ಮಾನವತೆ ರಕ್ಷಣೆಗೆ ಸಿದ್ಧಸೂತ್ರವೆ ರಕ್ಷೆ || 3 ||
Very nicely compiled . Also Audio helps to provide tune to the song . Well done . Great Job