ಪುಣ್ಯಚರಿತೆ ಭರತ ಮಾತೆ
ಸಣ್ಣದಲ್ಲ ಕೀರ್ತಿಯು
ವಿಶ್ವ ದೇಹದಲ್ಲಿ ಹೃದಯ
ದೇಶ ನಮ್ಮ ಸ್ಫೂರ್ತಿಯು || ಪ ||
ಜಗದೊಳೆಲ್ಲ ಅಂಧಕಾರ
ತುಂಬಿದಂಥ ಆ ದಿನ
ಮನುಕುಲಕ ಮಾನವೀಯ
ವೇದವೆ ನಿದರ್ಶನ || 1 ||
ಧೀರರೆಲ್ಲ ಸೇರಿ ರಾಷ್ಟ್ರ
ಪ್ರೇಮದಿಂದ ಕಟ್ಟುತ
ಸಾರಿ ಸತ್ಯ ಶಾಂತಿಯಿಂದ
ಅರಿಗಳನೆ ಅಟ್ಟುತ || 2 ||
ತೋರಿ ವಿಶ್ವಶಾಂತಿ ವಿಜಯ
ಧ್ವಜವನೆತ್ತಿ ಹಿಡಿಯುತ
ಮೊಗವ ಎತ್ತಿ ವಿಜಯಘೋಷ
ಧ್ವನಿಯು ಮುಗಿಲು ಮುಟ್ಟುತ || 3 ||
ಇಂದು ನಮ್ಮ ಸ್ವಾಭಿಮಾನ
ನಿರಭಿಮಾನವಾಗಿದೆ
ಮುಂದೆ ದೇಶ ಉಳಿಸುವಂಥ
ಹೊಣೆಯು ನಮ್ಮ ಮೇಲಿದೆ || 4 ||