ಪ್ರಸಿದ್ಧಿಯ ಬಯಸದ ಕಾರ್ಯವು ನಮ್ಮದು

ಪ್ರಸಿದ್ಧಿಯ ಬಯಸದ ಕಾರ್ಯವು ನಮ್ಮದು
ಬದ್ಧತೆ ಧ್ಯೇಯದ ಕಡೆಗೆ
ಸತತ ಪರಿಶ್ರಮ ಸಾಧನೆಯೊಂದಿಗೆ
ಶ್ರದ್ಧಾಭಕ್ತಿಯ ಜತೆಗೆ || ಪ ||

ಸಮಗ್ರ ಸಮಾಜದ ಐಕ್ಯವೆ ಲಕ್ಷ್ಯ
ಸಂಘವೇ ಜೀವನಕಾರ್ಯ
ನಯಸಾಧನೆ ಜತೆ ವಿನಯದ ಭೂಷಣ
ಹನುಮನ ಭುಜಬಲ ಧೈರ್ಯ || 1 ||

ಕಾಣುವ ವಿವಿಧತೆಯೊಳಗಡೆ ಅಡಗಿದೆ
ಕುಸಿಯದ ಐಕ್ಯದ ಬಂಧ
ಅನುಶಾಸನ ಆತ್ಮೀಯತೆಗಳೇ ಬಲ
ಬದುಕಿನ ರೀತಿಯೆ ಚೆಂದ || 2 ||

ಅವಿಚಲ ಸದೃಢ ಧ್ಯೇಯಾದರ್ಶಕೆ
ಕೇಶವ ಮೂರ್ತ ಸ್ವರೂಪ
ಬತ್ತಿಯ ತೆರದಲಿ ದೇಹವ ಉರಿಸುತ
ದಾರಿಯ ತೋರಿದ ದೀಪ || 3 ||

Leave a Reply

Your email address will not be published. Required fields are marked *