ಓಂಕಾರದ ಮಂತ್ರದನುರಣನ ಎಲ್ಲಡೆಯು
ಹಿಂದುತ್ವ ಹಿರಿದೆನಿಸುತಿಹುದ ನೋಡಿ
ಕಿರಿದಾದ ಮಂತ್ರದಲಿ ಹಿರಿದಾದ ತಂತ್ರವಿದೆ
ಒಂದುಗೂಡಿಸುತಿಹುದು ಎಂಥ ಮೋಡಿ || ಪ ||
ಭಾರತದ ಭಾಗ್ಯ ರವಿ ಬಾನಿನಲ್ಲಿ ಜಗಜಗಿಸಿ
ಭರವಸೆಯ ಬೆಳಕೆಂದು ಮೂಡುತಿಹುದು
ವಿಸ್ಮೃತಿಯ ನಶೆ ಇಳಿದು ಸ್ಪುಟಗೊಂಡ ದಿಶೆಯುಳಿದು
ತರುಣರೆದೆ ವಿಶ್ವಾಸ ಮೂಡುತಿಹುದು || 1 ||
ಸ್ವರ್ಣಿಮದಕ್ಷಣ ಒಂದು ಸನಿಹಕ್ಕೆ ತರುತಿಹುದು
ವರ್ಣ ವೈಷಮ್ಯದುರಿ ಆರುತಿಹುದು
ಜನ್ಮದಿಂದಲಿ ಜಂತು ಕರ್ಮದಿಂ ಬ್ರಹ್ಮತ್ವ
ಧರ್ಮಸೂಕ್ಷದ ಸತ್ಯ ಬೆಳಗುತಿಹುದು || 2 ||
ಕೇಶವನ ಕನಸುಗಳು ನನಸಾಗುತಿವೆ ಇಂದು
ಬೆಸೆಯುತಿದೆ ಮನಮನವ ಸ್ನೇಹ ಸೇತು
ಸಮರಸದ ಕುಸುಮವದು ಸಹಜ ವಿಕಸನಗೊಂಡು
ಪಸರಿಸಿದೆ ದಶ ದಿಶೆಗೆ ತಂಪು ಕಂಪು || 3 ||