ಓ ದಾರಿಗನೇ ಪ್ರಿಯ ನೇಹಿಗನೇ

ಓ ದಾರಿಗನೇ ಪ್ರಿಯ ನೇಹಿಗನೇ
ಗೈಯುವ ಬಾ ನವಯುಗ ನಿರ್ಮಾಣ
ಸಮಾಜದೇವತೆಗರ್ಪಿತವಾಗಲಿ
ನಮ್ಮೆಲ್ಲ ತನು ಮನ ಧನ ಪ್ರಾಣ         || ಪ ||

ಹಿಡಿಕೂಳಿನ ಬರಿಗೋಳಿನ ಬಾಳಿಗೆ
ಮಾರುವೆಯಾ ತನುಮನವನು ಗೆಳೆಯಾ
ಪಶುಬಲದಿದಿರಿಗೆ ಅಡಿಯಾಳಾಗುತ
ಮರೆಯುವೆಯಾ ಮಾನವ್ಯದ ಗುರಿಯಾ?    || 1 ||

ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ
ಮಾನವ ಜೀವನದನಂತ ಮಹಿಮೆ
ಬಿಸಿಯಾರುವ ಮೊದಲೇ ಜಗವರಿಯಲಿ
ನಿನ್ನಯ ಪವಿತ್ರ ರಕ್ತದ ಹಿರಿಮೆ           || 2 ||

ಇಚ್ಚಾಶಕ್ತಿಯು ಭೂಮನವನಪ್ಪಲಿ
ಮೋಹದ ಭೋಗದ ಕನಸನು ಮುರಿದು
ಹೃದಯ ಹಕ್ಕಿಯು ಆಗಸವಾಳಲಿ
ಸೋಗಿನ ಸೊಬಗಿನ ಪೊರೆಯನು ಹರಿದು   || 3 ||

ಬಾಳೆಲ್ಲವು ಮುಡುಪಾಗಿಡು ವೀರನೆ
ದಿನದಿನವೂ ಹೊಸ ಹೊಸ ಸಾಹಸಕೆ
ಧ್ಯೇಯದ ಆ ಆನಂದದಿ ವಿಹರಿಸು
ಹರಡಲಿ ಚಿರಕೀರ್ತಿಯು ಯುಗ ಯುಗಕೆ   || 4 ||

Leave a Reply

Your email address will not be published. Required fields are marked *