ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ

ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ
ಭಾಗವಾದ ಭಾರತದ ಭೂಮಿಯೆಲ್ಲವೂ
ಅದರೊಳಗೆ ಹುದುಗಿರುವ ಪ್ರಾಣವೆಲ್ಲವು
ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ || ಪ ||

ದಶಮಿಯಂದು ಪೂಜಿಸಿಟ್ಟ ಖಡ್ಗ ಕರದಿ ಧರಿಸಿ
ಅರಿಯ ರುಂಡಮುಂಡವೆಲ್ಲ ಕಾಳಿಪಾದ ಸೇರಿಸಿ
ಸಮಾಜಕಡಲ ಸದ್ಭಾವವ ಜಾಗೃತಗೊಳಿಸಿ
ಕ್ಷಾತ್ರ ಬಲದ ಇರುವಿಕೆಯ ಸತ್ಯ ಅರುಹಿಸಿ || 1 ||

ಶಿವಪ್ರತಾಪ ಧೀರಪಂಥ ಸೈನ್ಯವೇ ನಮದು
ರಾಣಿ ಝಾನ್ಸಿ, ಚೆನ್ನಮ್ಮರ ಕುವರರು ನಾವು
ತಾಯಮಮತೆ ಋಣಕೆ ಬಾಳ ಮುಡಿಪನಿಡುವೆವು
ಧರ್ಮಕಾಗಿ ಸ್ವಾರ್ಥವನ್ನು ತೊರೆದುಬಿಡುವವು || 2 ||

ನಮ್ಮ ಪಾಲಿಗೇಕ ದೈವ ದೇಶವೇ ತಾನೆ?
ಅದರ ಹೊರತು ಎಮ್ಮಬದುಕು ಮಿತ್ಯವಲ್ಲವೆ?
ಇದನ್ನು ಕೂಗಿ ಸಾರಲೇಕೆ ಭಯವೇ ಗೆಳೆಯನೆ?
ನೀನೆ ಧೀರ ಹಿಂದು ದಿಟವ ಸಾರು ಮಿತ್ರನೆ || 3 ||

Leave a Reply

Your email address will not be published. Required fields are marked *