ಮೇರುಸದೃಶ ಜ್ಞಾನಿ

ಮೇರುಸದೃಶ ಜ್ಞಾನಿ ರಾಷ್ಟ್ರಯುಗ ದ್ರಷ್ಟಾರ
ಯುಗಪುರುಷ ನೀನಾದೆ ಹೇ ಮಾಧವ || ಪ ||

ಅಡಿಗಡಿಗೆ ಭಾರತದ ಕೀರ್ತಿಯನು ಪಸರಿಸುವ
ಯೋಜನೆಯ ರೂಪಿಸಿದ ಓ ಯೋಜಕ
ಪರಮವೈಭವ ಪದಕೆ ಭಾರತಿಯನೆತ್ತರಿಪ
ಮಾರ್ಗದರ್ಶಕನಾದೆ ನೀ ಮಾಧವ || 1 ||

ಜನಮನವನೆಚ್ಚರಿಸಿ ರಾಷ್ಟ್ರವೇ ಮೊದಲೆಂದೆ
ನಾನಲ್ಲ ನೀನೆಂಬ ಕರೆ ನೀಡಿದೆ
ಸ್ವಾರ್ಥವಿಲ್ಲದ ತ್ಯಾಗ ಸಾರ್ಥಕವು ಎಂದೆಂಬ
ಮೌಲ್ಯವನು ಜೀವನದಿ ನೀ ತೋರಿದೆ || 2 ||

ಮಾತೃಋಣ ತೀರಿಸುವ ಋಣಭಾರ ಎಮಗಿಹುದು
ನಿತ್ಯಸಾಧನೆಯೊಂದೆ ಸನ್ಮಾರ್ಗವೆಂದೆ
ಏಕಾತ್ಮಭಾವದಲೆ ಭಾರತವ ನಿರ್ಮಿಸುವ
ಜ್ಞಾನವನೆ ನೀಡಿದೇ ಋಷಿಪುಂಗವ || 3 ||

Leave a Reply

Your email address will not be published. Required fields are marked *