ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರ
ಪುಣ್ಯಭೂಮಿಯ ಸತತ ನೆನೆಯುವ ನಿತ್ಯಸಾಧನೆ ಸುಂದರ ॥ ಪ॥
ಭಾಷೆ ಭಿನ್ನತೆ ಹಿಂದೆ ಸರಿದಿದೆ ಹಿಂದು ಸತ್ವವೆ ಪ್ರೇರಣೆ
ದ್ವೇಷ ಕಳೆಯುತ ಶಕ್ತವಾಗಿದೆ ಸಾಮರಸ್ಯದ ಭಾವನೆ
ದೋಷವೆಲ್ಲವ ಸರಿಸಿ ದೂರಕೆ ನಿತ್ಯ ನಡೆದಿದೆ ಸಾಧನೆ
ನಾಶವಾಗಿದೆ ಸ್ವಾರ್ಥಲಾಲಸೆ ಸ್ವಂತವೆಲ್ಲವು ಅರ್ಪಣೆ ॥ 1 ॥
ಧ್ಯೇಯಮಾರ್ಗದಿ ನಡೆಯು ನಮ್ಮದು ಕಾರ್ಯಪದ್ಧತಿ ಸಾತ್ವಿಕ
ದೇಶಕಾಗಿಯೆ ದುಡಿವ ಕಾರ್ಯಕೆ ಭಗವೆ ಎಮ್ಮಯ ಪ್ರೇರಕ
ಸಿದ್ಧಗೊಂಡಿದೆ ಕಾರ್ಯಭೂಮಿಕೆ ವ್ಯಕ್ತಿ ವ್ಯಕ್ತಿಯು ಸಾಧಕ
ಶತಕದಂಚಿನ ಸಂಘಕಾರ್ಯವೆ ನಾಡಿನೇಳ್ಗೆಗೆ ಪೂರಕ ॥ 2 ॥
ದೇಶಕಾರ್ಯವೆ ಈಶಕಾರ್ಯವು ಎಂಬ ತತ್ವದ ನೆಲೆಯಿದೆ
ಮೋಸವರಿಯದ ಭೇದವೆಣಿಸದ ಶುದ್ಧಸ್ನೇಹದ ಸೆಲೆಯಿದೆ
ರಾಷ್ಟ್ರದೇಳ್ಗೆಗೆ ಸತತ ದುಡಿಯಲು ಬದ್ಧರಾಗುವ ಛಲವಿದೆ
ಪರಮವೈಭವ ಗುರಿಯ ದಾರಿಗೆ ಸಂಘಕಾರ್ಯದ ಬಲವಿದೆ ॥ 3 ॥