ಕೇಶವನ ಕಲ್ಪನೆಯ ಅರಿತುಕೊಳ್ಳೋಣ
ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ || ಪ ||
ವಿಶ್ವಗುರುವು ನೀನೆ ತಾಯಿ ಭಾರತಿ ಎಂದು
ಗೌರವಿಸಿತು ಜಗವು ನಿನ್ನ ಬಳಿಗೆ ಬಂದು
ಮೈಮರೆಸಿತು ವೈಭವವು ಮಕ್ಕಳನಂದು
ಮರೆವಿನಿಂದ ಎರಗಿತು ದಾಸ್ಯವು ಬಂದು || 1 ||
ಕತ್ತಲೆಯಲ್ಲಿ ತುಂಬಿ ಮಕ್ಕಳ ಬದುಕು
ಕೇಶವನ ರೂಪದಲ್ಲಿ ಹೊಮ್ಮಿತು ಬೆಳಕು
ತಾಯಿಗಿಂತ ಮಿಗಿಲಲ್ಲ ಬಾಳು ಎಂದಿಗೂ
ದೇಹವಲ್ಲ ದೇಶವೆ ಅಮರ ಎಂದಿಗೂ || 2 ||
ಕೇಶವನು ನಡೆಸಿದ ಗಾಢ ಚಿಂತನೆ
ಚಿಂತನೆಯಿಂದುದುಸಿತು ಸಂಘವ ತಾನೆ
ಶಾಖೆಯಿಂದ ಅಳಿಯಿತು ಭೇದಭಾವನೆ
ಮನಸುಗಳ ಬೆಸೆಯುವ ಅಮೋಘ ಕಲ್ಪನೆ || 3 ||