ಜಯಜಯ ಗೋಮಾತೆ, ಅಂಬ
ಜಯ ಜಯ ಗೋಮಾತೆ || ಪ ||
ದಿವಿಜರಿಗಾಶ್ರಯದಾತೇ,ತಾಯೇ
ಋಷಿ ಮುನಿಕುಲ ಸಂಪ್ರೀತೇ
ಭುವಿಯೊಳು ಕಾಣುವ ದೇವತೆ, ನೀನು
ನಮಿಸುವೆ ನಿನ್ನಡಿಗೆ
ತಾಯೇ ನಮಿಸುವೆ ನಿನ್ನಡಿಗೆ || 1 ||
ಅನುದಿನ ಸೇವೆಯ ಗೈವೆ, ತಾಯೆ
ಕರುಣದಿ ನಮ್ಮನು ಪೊರೆಯೇ
ವಸು ಕುವರಿಯೆ, ಆದಿತ್ಯ ಸಹೋದರಿ
ರುದ್ರರ ಹಡೆದಿಹ ಮಾತೆ ನೀ
ತ್ರಿಭುವನಪೋಷಿಣಿ ಮಾತೆ || 2 ||
ಪಾಪ ವಿನಾಶಿನಿ ತಾಯೇ,
ಭವ ತಾಪ ನಿವಾರಿಣಿ ಕಾಯೇ
ಕಾರುಣ್ಯದ ಖನಿ ವೈತರಣಿಯ ತಾರಿಣಿ
ಜಗಧಾರಿಣಿ ನಮಿಪೆ, ತಾಯೇ
ಜಗದೋದ್ಧಾರಿಣಿ ನಮಿಪೆ || 3 ||
ಸಕಲೌಷಧಗಳ ನಿಧಿಯೇ, ತಾಯೇ
ರೋಗನಿವಾರಿಣಿಯೇ
ವ್ಯಾಕುಲ ಕಳೆಯುವ, ಶಾಂತಿಯ ನೀಯುವ
ಸೌಖ್ಯ ಪ್ರದಾಯಿನಿಯೆ, ಅಂಬ
ಕಾಮಿತ ದಾಯಿನಿಯೇ || 4 ||